Sunday, March 3, 2024

Latest Posts

ಸುಮಲತಾ ಗೆಲ್ಲೋದು ಪಕ್ಕಾ- ರಾಕಿಂಗ್ ಸ್ಟಾರ್ ಯಶ್

- Advertisement -

ಮಂಡ್ಯ: ಲೋಕಸಭೆ ಚುನಾವಣೆ ಪ್ರಚಾರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ರು. ತಮ್ಮ ಅಭಿಮಾನಿ ಪ್ರಸಾದ್ ಎನ್ನುವವರ ಮನೆಯ ಗೃಹ ಪ್ರವೇಶಕ್ಕೆ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಬಂದಿದ್ದ ಯಶ್ ಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ರು.
 ಬಳಿಕ ಮಾತನಾಡಿದ ಯಶ್, ಚುನಾವಣೆ ಮುಗಿದ ಬಳಿಕ ಸುಮಲತಾರನ್ನು ಭೇಟಿ ಮಾಡಿದ್ದೆ. ಸುಮಲತಾ ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ. ಒಳ್ಳೆ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡತಾಗುತ್ತೆ. ಮಂಡ್ಯ ಫಲಿತಾಂಶ ವನ್ನ ನಿರ್ದಿಷ್ಟವಾಗಿ ಹೇಳೋಕಾಗ್ತಿಲ್ಲ. ಜನ ಹಿಂಗೂ ಆಗಬೋದು, ಹಂಗೂ ಆಗಬಹುದು ಅಂತ ಮಾತನಾಡ್ತಿದ್ದಾರೆ ಅಂತ ಹೇಳಿದ್ರು.

‘ನಾನು ಮಂಡ್ಯ ರಾಜಕಾರಣಕ್ಕೆ ಬರಲ್ಲ’

ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯಶ್, ಪ್ರಚಾರಕ್ಕೆ ಬಂದ್ವಿ ಹೋದ್ವಿ. ಆದ್ರೆ ಅಭ್ಯರ್ಥಿ ಬಂದಿದ್ದಾರಲ್ಲ. ನಾನು ಮಂಡ್ಯ ರಾಜಕಾರಣಕ್ಕೆ ಬರಲ್ಲ. ಸ್ಪರ್ಧೆ ಕೂಡ ಮಾಡಲ್ಲ. ಸುಮಲತಾ ಗೆದ್ದರೆ ಒಳ್ಳೆಯ ಕೆಲ್ಸ ಮಾಡ್ತಾರೆ ಎಂದ್ರು.

ಜೋಡೆತ್ತು ಸಿನಿಮಾ ಸೆಟ್ಟೇರುವ ವಿಚಾರಕ್ಕೆ ಮಾತನಾಡಿದ ರಾಕಿ ಬಾಯ್, ದರ್ಶನ್ ಪ್ರೀತಿಯಿಂದ ಜೋಡೆತ್ತು ಅಂತ ಹೇಳಿದ್ರು. ದರ್ಶನ್ ನನಗಿಂತ ಸೀನಿಯರ್ ನಟ. ದರ್ಶನ್ ಜೋಡೆತ್ತು ಅಂತ ಹೇಳಿದ್ದು ತುಂಬಾ ಫೇಮಸ್ ಆಯ್ತು. ಜೋಡೆತ್ತು ಟೈಟಲ್ ಕೂಡ ರಿಜಿಸ್ಟ್ರಾರ್ ಆಗಿದೆ. ನಾನೇನು ಆ ಸಿನಿಮಾ ದಲ್ಲಿ ನಟನೆ ಮಾಡೋದಿಲ್ಲ. ದರ್ಶನ್ ಜೊತೆ ಸಿನಿಮಾ ಮಾಡಬೇಕಂದ್ರೆ ಅವ್ರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಗಬೇಕು. ಒಳ್ಳೆಯ ಕಥೆ ಬಂದ್ರೆ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ. ಕೆಜಿಎಫ್ ಸಿನಿಮಾ ಶೂಟಿಂಗ್ ಶುರುವಾಗ್ತಿದೆ. ನಿಖಿಲ್ ಎಲ್ಲಿದ್ಯಪ್ಪಾ ಸಿನಿಮಾ ಗೆ ಒಳ್ಳೆಯದಾಗ್ಲಿ ಎಂದ ಯಶ್,ಫಲಿತಾಂಶ ಬಂದ ದಿನ ಸಾಧ್ಯವಾದ್ರೆ ಮಂಡ್ಯಕ್ಕೆ ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟ್ರು.

- Advertisement -

Latest Posts

Don't Miss