- Advertisement -
ಬೆಂಗಳೂರು: ಕುಂದಗೋಳ ಸಚಿವ ಸಿ.ಎಸ್ ಶಿವಳ್ಳಿ ಸಾವಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಅಂತ ನಾಲಗೆ ಹರಿಬಿಟ್ಟಿದ್ದಾರೆ, ನಮ್ಮ ವಿರುದ್ಧ ಆರೋಪ ಮಾಡುವ ಮೊದಲು, ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ನೀಡಿರುವ ಕಿರುಕುಳ ನೆನಪು ಮಾಡಿಕೊಳ್ಳಲಿ ಅಂತ ಚಾಟಿ ಬೀಸಿದ್ದಾರೆ.
ತಮಗಾಗಿರೋ ಅಪಮಾನ,ಕಿರುಕುಳವನ್ನು ಸಹಿಸಿಕೊಂಡಿರೋ ಧೈರ್ಯವಂತ ಹೆಣ್ಣು ಮಗಳು ತೇಜಸ್ವಿನಿ ಬಾಯಿ ಬಿಟ್ಟರೆ ಬಿಜೆಪಿ ನಾಯಕರ ಬಂಡವಾಳ ಬಯಲಾಗುತ್ತೆ ಅಂತ ಟ್ವೀಟ್ ಮಾಡೋ ಮೂಲಕ ಸಿದ್ದರಾಮಯ್ಯ ಬಿಜೆಪಿಗೆ ತಿರುಗುಬಾಣ ಬಿಟ್ಟಿದ್ದಾರೆ.
- Advertisement -