ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ A1 ಆರೋಪಿ ಪವಿತ್ರಾ ಅವರನ್ನು ಆರಂಭದಲ್ಲಿ ನೋಡಲು ಯಾರೂ ಬಂದಿರಲಿಲ್ಲ. ಇದರಿಂದ ಅವರಿಗೆ ಬೇಸರವಾಗಿ ಮನೆಯವರ ಜೊತೆ ಕಿರಿಕ್ ಮಾಡಿದ್ದರು. ನನ್ನನ್ನು ನೋಡಲು ಯಾರೂ ಬರುವುದಿಲ್ಲ, ನನ್ನನ್ನು ಯಾರೂ ಮಾತನಾಡಿಸುವುದಿಲ್ಲ ಎಂದು ಪವಿತ್ರಾ ಬೇಸರ ಮಾಡಿಕೊಂಡಿದ್ದರು. ಕೊನೆಗೂ ಪವಿತ್ರಾ ಮಗಳು ಹಾಗೂ ಪವಿತ್ರಾ ತಾಯಿ ಜೈಲಿಗೆ ಬಂದು ಭೇಟಿ ನೀಡಿದ್ದಾರೆ.
ಇದೀಗ ನಟಿ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಅವರು ಜೈಲಿಗೆ ಭೇಟಿ ನೀಡಿದ್ದಾರೆ ಮಾತುಕತೆ ನಡೆಸಿದ್ದಾರೆ. ಪವಿತ್ರಾ ಗೌಡ ಶಾಕ್ನಲ್ಲಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಜುಡಿಶಿಯಲ್ ಕಸ್ಟಡಿಲಿ ಇದ್ದ ಮೇಲೆ ಚೆನ್ನಾಗಿ ಇದ್ದೆ ಇರ್ತಾರೆ. ಅವರನ್ನ ಇಲ್ಲಿಗೆ ಹಿಂಸೆ ಕೊಡೋಕೆ ಕರ್ಕೋಂಡ್ ಬರಲ್ಲ. ಜಸ್ಟ್ ಒಂದು ಪರಿವರ್ತನೆಗೆ ಅಥವಾ ವಿಚಾರಣೆ ಮುಗಿದು ಬೇಲ್ ಸಿಗೋವರೆಗೂ ಇಲ್ಲಿರ್ಬೇಕು ಅಂತ ಇರೋದು. ಅದು ಬಿಟ್ಟರೆ ಕಸ್ಟಡಿಲೀ ಇರುವ ವಿಚಾರಾಧೀನ ಕೈದಿಗೆ ಏನು ಸೌಲಭ್ಯ ಇರುತ್ತೋ ಅದೇ ಸೌಲಭ್ಯ ಇರುತ್ತದೆ. ಅದು ಬಿಟ್ಟರೆ ಬೇರೆ ಏನು ವಿಶೇಷ ಸೌಲಭ್ಯ ಇರಲ್ಲ. ಅವರು ಕೂಡ ಹಾಗೇ ಇದ್ದಾರೆ. ಅವರಿಗೆ ಜೈಲು ಊಟ ಸೇರ್ತಿಲ್ವಂತೆ, ನೆಲದ ಮೇಲೆ ಮಲಗ್ತಿದ್ದಾರೆ ಅನ್ನೋದು ಮಾಧ್ಯಮಗಳ ಸೃಷ್ಟಿ, ಅದರಲ್ಲಿ ವಿಶೇಷತೆ ಏನಿಲ್ಲ ಕಾನೂನು ಎಲ್ಲರಿಗೂ ಒಂದೆ ಎಂದು ವಕೀಲರು ಹೇಳಿದ್ದಾರೆ.
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಮತ್ತು ಅವರ ಆಪ್ತೆ ಶಶಿಕಲಾ ಅವರು ಜೈಲಿಗೆ ಹೋಗಿದ್ದಾಗ ಹೇಗಿದ್ರು. ಅವರನ್ನು ನೋಡೋಕೆ ಹೋಗಿದ್ವಾ? ಹೇಗಿದ್ರು ಅಂತ ಕೇಳಿರ್ತೀವಿ. ಅದನ್ನೇ ಮಾಧ್ಯಮದವರು ತೋರಿಸಿರ್ತಾರೆ ಎಂದಿದ್ದಾರೆ.
ಬೇಲ್ ಬಗ್ಗೆ ಚರ್ಚೆ ಮಾಡೋಕೆ ಪವಿತ್ರಾ ಅವರನ್ನು ಭೇಟಿಯಾಗಿದ್ದೆ. ಅವರಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಘಟನೆ ಬಗ್ಗೆ ಏನೂ ಗೊತ್ತಿಲ್ಲದಿರುವಾಗ ಏಕಾಏಕಿ ಅವರನ್ನ ಕೇಳಿದಾಗ ಶಾಕಿಂಗ್ನಲ್ಲಿ ಇರ್ತಾರಲ್ವಾ, ಈಗ ಅವರು ಕೂಡ ಅದೇ ಶಾಕ್ನಲ್ಲಿ ಇದ್ದಾರೆ. ಯಾವಾಗ ತಪ್ಪು ಮಾಡಿರಲ್ಲ ಆವಾಗ ಖಂಡಿತವಾಗಲೂ ನೋವಾಗುತ್ತೆ. ಅದನ್ನೇ ಶಾಕ್ ಅನ್ನೋದು. ಅದೇ ಶಾಕ್ನಲ್ಲಿ ಪವಿತ್ರಾ ಇದ್ದಾರೆ. ತಪ್ಪು ಮಾಡಿರುವವರಿಗಾದ್ರೆ ತಪ್ಪು ಮಾಡಿದ್ದೀನಿ ಅನ್ನೋ ಮನೋಭಾವನೆ ಇರುತ್ತೆ. ಆದ್ರೆ ಯಾವುದೇ ತಪ್ಪು ಮಾಡಿಲ್ಲ ಅಂದಾಗ ಖಂಡಿತವಾಗಿಯೂ ಅವರಲ್ಲಿ ನೋವಿರುತ್ತೆ. ಶಾಕ್ ಆಗುತ್ತೆ. ಅದೇ ರೀತಿ ನಾನೇನು ತಪ್ಪು ಮಾಡಿಲ್ಲ ನನಗ್ಯಾಕೆ ಈ ತರ ಪರಿಸ್ಥಿತಿ ಬಂತು ಅನ್ನೋ ಭಾವನೆ ಅವರಲ್ಲಿದೆ. ಸ್ವಲ್ಪ ದಿನದ ನಂತರ ಅಂದ್ರೆ ಜು.4ರ ನಂತರ ಬೇಲ್ ಬಗ್ಗೆ ಇನ್ನಷ್ಟು ಪ್ಲ್ಯಾನ್ ಮಾಡ್ತೀವಿ ಎಂದರು.
ದರ್ಶನ್ ಭೇಟಿ ಮಾಡಿದ್ರಾ ಎನ್ನುವ ಪ್ರಶ್ನೆಗೆ, ಅವರನ್ನ ನಾನು ಭೇಟಿ ಮಾಡಿಲ್ಲ. ಒಂದು ವೇಳೆ ಭೇಟಿ ಮಾಡಿದ್ದೆ ಎಂದರೂ ಕಷ್ಟ.. ಭೇಟಿ ಮಾಡಿಲ್ಲ ಎಂದರೂ ಕಷ್ಟ. ಮತ್ತೆ ನೂರು ಪ್ರಶ್ನೆ ಉದ್ಭವವಾಗುತ್ತೆ ಎಂದು ನಗುತ್ತಾ ಉತ್ತರ ನೀಡಿ ವಕೀಲ ನಾರಾಯಣಸ್ವಾಮಿ ತೆರಳಿದ್ದಾರೆ.