Thursday, December 5, 2024

Latest Posts

ಹು-ಧಾ ಪಾಲಿಕೆ ಮೇಯರ್ ಪಟ್ಟಕ್ಕೆ ತೀವ್ರಗೊಂಡ ಪೈಪೋಟಿ…!

- Advertisement -

www.karnatakatv.net :ಹುಬ್ಬಳ್ಳಿ : ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ  ಮೇಯರ್, ಉಪ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ‌ ಶುರುವಾಗಿದೆ.

ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನ ಹಿಡಿಯುವುದರಲ್ಲಿ ಅನುಮಾನಗಳು ಉಳಿದಿಲ್ಲವಾದ್ದರಿಂದ, ಮೇಯರ್ ಯಾರು ಆಗುತ್ತಾರೆ ಎಂಬ ಚರ್ಚೆಗಳು ಆರಂಭಗೊಂಡಿವೆ.

ಮೇಯರ್ ಸ್ಥಾನವೂ ಹಿಂದುಳಿದ ವರ್ಗ ಎ ಗೆ ಮೀಸಲು ಇರುವುದರಿಂದ ಮತ್ತು ಧಾರವಾಡಕ್ಕೆ ಮೇಯರ್ ಸ್ಥಾನ ಕೊಡಬೇಕೆಂಬ ಕೂಗು ಆಗಾಗ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 3ನೇ ವಾರ್ಡಿನಿಂದ ಜಯಭೇರಿ ಬಾರಿಸಿರುವ ವೀರೇಶ ಅಂಚಟಗೇರಿಯವರೇ ಮುಂದಿನ ಮೇಯರ್ ಆಗುತ್ತಾರೆಂಬ ಮಾತುಗಳು ಕೇಳಿ ಬರುತ್ತಿದೆ.

ಹುಬ್ಬಳ್ಳಿಯಲ್ಲಿ ಮಾಜಿ ಮೇಯರ್ ಪತಿ ಹಾಗೂ ಈ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣ ಮಜ್ಜಗಿ ,ರಾಮಣ್ಣ ಬಡಿಗೇರ ಮತ್ತು ಸತೀಶ್ ಹಾನಗಲ್ ಅವರ  ಹೆಸರುಗಳು ಕೇಳಿ ಬರುತ್ತಿವೆ.

ಆದರೆ, ಮೇಯರ್ ಪಟ್ಟ  ಯಾರಿಗೆ ದಕ್ಕಲಿದೆ ಎಂಬ ಕುತೂಹಲ ಮೂಡಿದೆ. ಹುಬ್ಬಳ್ಳಿಯವರಿಗೆ ಮೇಯರ್ ಸ್ಥಾನ ಒಲಿಯುತಾ ಅಥವಾ ಧಾರವಾಡಕ್ಕೆ ಬಿಟ್ಟು ಕೊಡುತ್ತಾರಾ ಎಂಬುದು ನಿಗೂಢವಾಗಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss