ನಾವು ಹಲವು ಥರಹದ ಬಜ್ಜಿ-ಬೋಂಡಾಗಳನ್ನ ತಿಂದಿರ್ತಿವಿ. ಆಲೂ, ಮಿರ್ಚಿ, ಈರುಳ್ಳಿ ಪಕೋಡಾಗಳ ಟೇಸ್ಟ್ ನೋಡಿರ್ತಿವಿ. ಆದ್ರೆ ಯಾವತ್ತಾದ್ರೂ ಹುಬ್ಬಳ್ಳಿ-ಧಾರವಾಡ್ ಸ್ಟೈಲ್ ಬೋಂಡಾ ತಿಂದಿದ್ದೀರಾ..? ಇಲ್ವಾ..? ಹಾಗಾದ್ರೆ ಬನ್ನಿ .. ಹುಬ್ಳಿ-ಧಾರವಾಡ್ ಸ್ಟೈಲ್ ಬೋಂಡಾ ಮಾಡೋಕ್ಕೆ ಬೇಕಾಗಿರೋ ಸಾಮಗ್ರಿ ನೋಟ್ ಮಾಡಿಕೊಳ್ಳಿ.
ಒಂದು ಕಪ್ ಕಡಲೆಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು, ಅರ್ಧ ಸ್ಪೂನ್ ವಾಮ, ಒಂದರಿಂದ ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ, 8ರಿಂದ 10 ಎಸಳು ಬೆಳ್ಳುಳ್ಳಿ,ಅರ್ಧ ಸ್ಪೂನ್ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿನ ಕೊತ್ತೊಂಬರಿ ಸೊಪ್ಪು ಚಿಟಿಕೆ ಇಂಗು, ಅವಶ್ಯಕತೆ ಇದ್ದಷ್ಟು ಉಪ್ಪು, ನೀರು, ಕರಿಯಲು ಬೇಕಾದಷ್ಟು ಎಣ್ಣೆ.
ಮೊದಲು ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆಯನ್ನ ಸೇರಿಸಿ ಪೇಸ್ಟ್ ರೆಡಿ ಮಾಡಿ. ನಂತರ, ಅಗತ್ಯವಿದ್ದಷ್ಟು ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕರಗಿಸಿ. ಇದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ವಾಮ, ಸಣ್ಣಗೆ ಹೆಚ್ಚಿದ ಈರುಳ್ಳಿ, ರೆಡಿ ಮಾಡಿಟ್ಟುಕೊಂಡ ಜಿಂಜರ್-ಗಾರ್ಲಿಕ್-ಚಿಲ್ಲಿ ಪೇಸ್ಟ್, ಕೊತ್ತೊಂಬರಿ ಸೊಪ್ಪು, ಇಂಗು, ಒಂದು ಸ್ಪೂನ್ ಎಣ್ಣೆ ಹಾಕಿ ಥಿಕ್ ಬ್ಯಾಟರ್ ರೆಡಿ ಮಾಡಿಕೊಳ್ಳಿ.
15 ನಿಮಿಷ ಈ ಬ್ಯಾಟರನ್ನ ಪಕ್ಕಕ್ಕಿರಿಸಿ, ನಂತರ ಬಜಿ ರೀತಿ ಕಾದ ಎಣ್ಣೆಯಲ್ಲಿ ತಿಳಿ ಕಂದು ಬಣ್ಣ ಬರುವವರೆಗೂ ಕರೆದ್ರೆ, ಹುಬ್ಬಳ್ಳಿ- ಧಾರವಾಡ್ ಸ್ಟೈಲ್ ಬೋಂಡಾ ರೆಡಿ. ಇದನ್ನ ಸಾಸ್ ಅಥವಾ ಚಟ್ನಿ ಜೊತೆ ಸರ್ವ್ ಮಾಡಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.