ಪ್ರತಿವರ್ಷವೂ ಹೊಸ ಸಾಧನೆಗಳನ್ನು ದಾಖಲಿಸುತ್ತಿರುವ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ಬಾರಿ ದೇಶದ ರೈಲ್ವೆ ವಿಭಾಗಗಳ ಪೈಕಿ ಪ್ರಮುಖ ಸಾಧನೆಯನ್ನು ಸಾಧಿಸಿದೆ. ಸರಕು ಲೋಡಿಂಗ್‌ನಲ್ಲಿ ದೇಶದ 70 ರೈಲ್ವೆ ವಿಭಾಗಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸುವ ಮೂಲಕ ಹುಬ್ಬಳ್ಳಿ ರೈಲ್ವೆ ವಿಭಾಗವು ಮತ್ತೊಮ್ಮೆ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಮೊದಲ ಸ್ಥಾನ ಪಡೆದಿದೆ
ಹುಬ್ಬಳ್ಳಿಯ ರೈಲ್ವೆ ವಿಭಾಗವು ಈ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯ ಎಲ್ಲಾ 70 ವಿಭಾಗಗಳ ಪೈಕಿ ಸರಕು ಲೋಡಿಂಗ್ ಸುಧಾರಣೆಯಲ್ಲಿ ಮೊದಲ ಸ್ಥಾನವನ್ನು ಪಡೆದು ಮಹತ್ತರ ಸಾಧನೆ ಮಾಡಿದೆ. ಇದು ಕಾರ್ಯಾಚರಣಾ ಕಾರ್ಯಕ್ಷಮತೆ ಹಾಗೂ ಗ್ರಾಹಕ ಕೇಂದ್ರಿತ ಉಪಕ್ರಮಗಳತ್ತ ವಿಭಾಗದ ನಿರಂತರ ಕೇಂದ್ರೀಕರಣವನ್ನು ತೋರಿಸುತ್ತದೆ.
ರೈಲ್ವೆ ಬೋರ್ಡ್‌ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಹುಬ್ಬಳ್ಳಿ ವಿಭಾಗವು ಈ ವರ್ಷ 20.78 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದೆ. ಹಿಂದಿನ ವರ್ಷದ 16.42 ಮಿಲಿಯನ್ ಟನ್‌ಗೆ ಹೋಲಿಸಿದರೆ 4.36 ಮಿಲಿಯನ್ ಟನ್ ವೃದ್ಧಿಯನ್ನು ಸಾಧಿಸಿದೆ. ವರ್ಷಕ್ಕೆ 10 ಮಿಲಿಯನ್ ಟನ್‌ಗಿಂತ ಹೆಚ್ಚು ಸರಕುಗಳನ್ನು ನಿರ್ವಹಿಸುವ ಎಲ್ಲಾ ವಿಭಾಗಗಳ ಪೈಕಿ ಇದು ಅತ್ಯಧಿಕ ಸುಧಾರಣೆ ದಾಖಲಿಸಿದ ವಿಭಾಗವಾಗಿದೆ.
ಈ ಸಾಧನೆ ಮೂಲಸೌಕರ್ಯ ವೃದ್ಧಿ, ಸರಕು ಬೋಗಿಗಳ ಸಮರ್ಪಕ ಅನುಷ್ಠಾನ, ಟರ್ಮಿನಲ್ ಹ್ಯಾಂಡ್ಲಿಂಗ್ ಸುಧಾರಣೆ ಹಾಗೂ ವೇಗವಾದ ರೇಕ್ ಟರ್ನ್‌ರೌಂಡ್ ಖಾತ್ರಿಪಡಿಸುವಲ್ಲಿ ರೈಲ್ವೆಯ ನಿಷ್ಠಾವಂತ ಪ್ರಯತ್ನಗಳನ್ನು ತೋರಿಸುತ್ತದೆ.
ಹುಬ್ಬಳ್ಳಿಯ ರೈಲ್ವೆ ವಿಭಾಗವು ಕಲ್ಲಿದ್ದಲು, ಕಬ್ಬಿಣ, ಉಕ್ಕು, ಸಿಮೆಂಟ್, ಧಾನ್ಯಗಳು ಮತ್ತು ರಸಗೊಬ್ಬರಗಳು ಸೇರಿದಂತೆ ವಿವಿಧ ವಾಣಿಜ್ಯ ಸರಕುಗಳ ಲೋಡಿಂಗ್‌ನಲ್ಲಿ ಗಣನೀಯ ವೈವಿಧ್ಯತೆ ಸಾಧಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ಹುಬ್ಬಳ್ಳಿಯ ರೈಲ್ವೆ ವಿಭಾಗ ದೇಶದಲ್ಲಿ ಹೆಸರುವಾಸಿಯಾಗಲಿ ಅನ್ನೋದು ಎಲ್ಲರ ಆಶಯವಾಗಿದೆ.
ವರದಿ : ಲಾವಣ್ಯ ಅನಿಗೋಳ

