ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯುವಂತೆ ವಿಚಾರವಾಗಿ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಮಅದ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ದುಷ್ಕ್ರತ್ಯ ಮಾಡೋರು ಹೊರಗಡೆ ಬಂದ್ರೆ ಬೆಂಕಿ ಹಚ್ಚುತ್ತಾರೆ. ಆ ದಿನದ ಗಲಭೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ಹೊಡದಿದ್ರು ಈ ಬಾರಿ ಕಲ್ಲು ಹೊಡೆಯಲ್ಲ ಬೆಂಕಿ ಹಚ್ಚುತ್ತಾರೆ. ಪತ್ರ ಬರೆದಿರೋದು ಹ್ಯೇಯ ಕೃತ್ಯ. ಅಲ್ಪ ಸಂಖ್ಯಾತರ ತುಷ್ಟೀಕರಣವನ್ನು ಮೀರಿ ಕಾಂಗ್ರೆಸ್ ಹೋಗ್ತಿದೆ. ಉಪ ಮುಖ್ಯಮಂತ್ರಿಗಳ ಲೆಟರ್ ಇದೆ, ಆದರೆ ಮುಖ್ಯಮಂತ್ರಿಗಳು ಆ ರೀತಿ ಇಲ್ಲ ಅಂತಾರೆ. ಇಬ್ಬರ ನಡುವೆ ಸಾಮ್ಯತೆ ಇಲ್ಲ.
ಇನ್ ಡೈರಕ್ಟ್ ಆಗಿ ಕಾಂಗ್ರೆಸ್ ಸಪೋರ್ಟ್ ಮಾಡ್ತಿದೆ. ಡಿಕೆ ಶಿವಕುಮಾರ್ ಇಂತಹ ಕೆಲಸಕ್ಕೆ ಕೈ ಹಾಕಬಾರದು. ದುಷ್ಕ್ರತ್ಯ ಮಾಡೋರು ಯಾರೂ, ಅಮಾಯಕರು ಯಾರು ಅನ್ನೋದಕ್ಕೆ ಉಪಮುಖ್ಯಮಂತ್ರಿಗಳು ವಾಖ್ಯಾನ ಕೊಡಬೇಕು. ನಾವೆಲ್ಲ ಅದಕ್ಕೆ ವಿಟ್ನೆಸ್,
ಪೊಲೀಸ್ ಠಾಣೆ ಕಬ್ಜಾ ಮಾಡೋಕೆ ಹೋಗಿದ್ರು, ಪೋಲಿಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಅಕಸ್ಮಾತ್ ಇಂಥವರನ್ನ ಹೊರಗೆ ಬಿಟ್ರೆ, ಅವರಿಗೆ ಪ್ರಚೋದನೆ ಸಿಗತ್ತೆ ಮತ್ತೆ ಗಲಾಟೆ ಮಾಡಿದ್ತೆ ಕಾಂಗ್ರೆಸ್ ಬಿಡಿಸುತ್ತೆ ಅನ್ನೋ ಪ್ರಚೋದನೆ ಸಿಗುತ್ತೆ
ಇಂಥವರನ್ನು ಬಿಡಸಿದ್ರೆ, ಶಿವಮೊಗ್ಗ ತರಹ ಘಟನೆ ಎಲ್ಲಕಡೆ ಆಗತ್ತೆ, ಅಕಸ್ಮಾತ್ ಕಾಂಗ್ರೆಸ್ ಬಿಡಸಿದ್ರೆ, ನಾವು ಹೋರಾಟ ಮಾಡ್ತೀವಿ. ಹುಬ್ಬಳ್ಳಿ ಗಲಾಟೆಯಲ್ಲಿ ಅರೆಸ್ಟ್ ಮಾಡಿದ್ದು ಪೊಲೀಸ್ ಅಧಿಕಾರಿಗಳೇ.ಹಾಗಾದ್ರೆ ಅವರ ನೈತಿಕ ಸ್ಥೈರ್ಯ ಕುಂದಿಸೋ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಟೆಂಗಿನಕಾಯಿ ಸರ್ಕಾರದ ವಿರುದ್ದ ಕಿಡಿಕಾರಿದರು.
ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!
Road cross; ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಅಪರಿಚಿತ ಜೀವಾಂತ್ಯ..!