ನಮ್ಮ ನಾಯಕ ಅರವಿಂದ ಬೆಲ್ಲದಗೆ ಅನ್ಯಾಯವಾಗಿದೆ: ಪ್ರತಿಭಟನೆ ಬೇಡ ಅಂದರೆ ಹೇಗೆ…?

ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅರವಿಂದ ಬೆಲ್ಲದ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ನಲ್ಲಿ ಅರವಿಂದ ಬೆಲ್ಲದ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದ ವೇಳೆ ಪೊಲೀಸರ ಮತ್ತು ಅರವಿಂದ ಬೆಲ್ಲದ ಅಭಿಮಾನಿಗಳ ನಡುವೆ ವಾಗ್ವಾದ ನಡೆಯಿತು.

ನಾವು ಯಾವುದೇ ಕಾರಣಕ್ಕೂ ಅಶಾಂತಿಯನ್ನು ಹುಟ್ಟು ಹಾಕುವುದಿಲ್ಲ. ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಶಾಸಕ ಅರವಿಂದ ಬೆಲ್ಲದ ಬೆಂಬಲಿಗ ರಘು ಹಿರೇಗೌಡರ ನೇತೃತ್ವದಲ್ಲಿ ಪೊಲೀಸರಿಗೆ ಮನವಿ ಮಾಡಿದರು.ಇನ್ನೂ ಗೋಕುಲ ರೋಡ್ ಪೊಲೀಸ್ ಠಾಣೆ ಪಿಐ ಕಾಲಿಮಿರ್ಜಿಯವರು, ಯಾವುದೇ ರೀತಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡದಂತೆ ಮನವೊಲಿಸಿದರು.

ಕರ್ನಾಟಕ ಟಿವಿ, ಹುಬ್ಬಳ್ಳಿ-ಧಾರವಾಡ

About The Author