ಹುಬ್ಬಳ್ಳಿ: ಮೊಹರಮ್ ಹಬ್ಬ ಅಂದರೆ ಅದು ಕೇವಲ ಇಸ್ಲಾಂ ಧರ್ಮದವರು ಮಾತ್ರ ಆಚರಣೆ ಮಾಡುವ ಹಬ್ಬವಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಹಬ್ಬ ಎಂದೇ ಮೊಹರಮ್ ಹಬ್ಬ ಖ್ಯಾತಿ ಪಡೆದಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ಬಿಡನಾಳ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗುವಂತೆ ಆಚರಣೆ ಮಾಡಲಾಯಿತು. ಜಾತಿ ಬಿಡು ಪ್ರೀತಿ ಮಾಡು ಎಂಬುವಂತ ಘೋಷವಾಕ್ಯದಲ್ಲಿ ಗ್ರಾಮಸ್ಥರು ಸಂಪ್ರದಾಯಿಕ ಮೊಹರಮ್ ಆಚರಣೆ ಮಾಡಿದರು. ಹುತಾತ್ಮರನ್ನು ಸ್ಮರಿಸುವ ಶೋಕದ ಹಬ್ಬವಾಗಿ ಆರಂಭಗೊಂಡ ಮೊಹರಂ ಕಾಲಕಳೆದ ನಂತರ ಭಾವೈಕ್ಯ ಬೆಸೆಯುವ ಹಬ್ಬವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯ ಧರ್ಮನಿರಪೇಕ್ಷ ಹಬ್ಬವಾಗಿ ಆಚರಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಿಡನಾಳ ಗ್ರಾಮದಲ್ಲಿ ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು.
ಇನ್ನೂ ಇದೇ ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಮಹಿಳೆಯರು ಜಾತಿ ಮತ ಬೇಧವನ್ನು ಮರೆತು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿರುವುದು ವಿಶೇಷವಾಗಿದೆ. ಜಾತಿ, ಧರ್ಮ, ಭೇದ-ಭಾವದ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯದ ಕೊಂಡಿಯಾಗಿರುವ ಮೊಹರಂ ಹಬ್ಬದ ಆಚರಣೆಯು ಆಧುನಿಕ ಯುಗದಲ್ಲೂ ಸ್ನೇಹ, ಸೌಹಾರ್ದ, ಸಹೋದರತ್ವದ ಸಂಕೇತವಾಗಿ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಜಾನಪದೀಯ ನೆಲೆಯನ್ನು ಕಂಡುಕೊಂಡು ಧರ್ಮದ ಮೇರೆಯನ್ನು ಮೀರಿದೆ. ಆ ಮೂಲಕ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಉಕ್ತಿಗೆ ಬಾಷ್ಯವನ್ನು ಬರೆದ ಹಬ್ಬವಾಗಿ ಮೊಹರಂ ಕಂಡು ಬರುತ್ತಿದೆ.
Reels : ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ: ಸಾವು ಬದುಕಿನ ನಡುವೆ ಹೋರಾಟ
Lodge : ಹಾಸನ : ಅನೈತಿಕ ಚಟುವಟಿಕೆ ವಿಚಾರ : ಲಾಡ್ಜ್ ಮೇಲೆ ದಾಳಿ, ಮೂವರ ಬಂಧನ