ಹುಬ್ಬಳ್ಳಿ:ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಹಾಗೂ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೌಲಭ್ಯ ವಂಚಿತವಾಗಿದೆ ಎಂದು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಎದುರು ಸಮಾವೇಶಗೊಂಡ ಕಾರ್ಯಕರ್ತರು ಬೇಕೇ ಬೇಕು ನ್ಯಾಯ ಬೇಕು ಎಂದು ಅನುದಾನ ಬಿಡುಗಡೆ ಮಾಡದ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಕಾಲೇಜಿನಲ್ಲಿ ಇರುವ ಸಮಸ್ಯೆ ಪರಿಹರಿಸಬೇಕು ಯಾವುದೇ ಜನಪ್ರತಿನಿಧಿಗಳು ವಿದ್ಯಾರ್ಥಿಗಳನ್ನು ಆಲಿಸಲು ಸಿದ್ಧರಿಲ್ಲ ಕಾಲೇಜು ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಪ್ರಾಚಾರ್ಯರು ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಾಧ್ಯಾಪಕರು ಸರಿಯಾದ ಸಮಯಕ್ಕೆ ಬರಲ್ಲ, ಸರ್ಕಾರಿ ಕಾಲೇಜು ಅಂದರೆ ಅವರಿಗೆ ಕಾಳಜಿ ಇಲ್ಲ, ಡೋರ್ ಇಲ್ಲ, ಸ್ವಚ್ಛತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಜಿನಿಯರಿಂಗ್ ಎಂಬಿಎ ಮಾಡುವುದು ವಿದ್ಯಾರ್ಥಿಗಳ ಕನಸಾಗಿದೆ ದೊಡ್ಡ ಕಾಲೇಜುಗಳಲ್ಲಿ ಸರ್ಕಾರಿ ಸೀಟ್ ಕೊಡುತ್ತಿಲ್ಲ. ಖಾಸಗಿ ಮಾಡಿ ಹಣ ತಿನ್ನುತ್ತಿದ್ದಾರೆ. ಖಾಸಗಿ ಕಾಲೇಜು ದುಡ್ಡಿಗೆ ಮಾರಿಕೊಳ್ಳುತ್ತಿದ್ದಾರೆ. ಲ್ಯಾಬ್ ಗಳು ಸರಿ ಇಲ್ಲ ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
KK George : ಹಾಸನ : ಸೋಲಾರ್ ಪ್ಲಾಂಟ್ ಗೆ ಸ್ಥಳ ಪರಿಶೀಲನೆ ನಡೆಸಿ ಹೇಳಿಕೆ ನೀಡಿದ ಸಚಿವ ಕೆಜೆ ಜಾರ್ಜ್