Thursday, May 30, 2024

Latest Posts

ಹುಬ್ಬಳ್ಳಿ ಕಾರ್ಪೋರೇಟರ್ ಮಗಳ ಹ*ತ್ಯೆ: ಮನಬಂದಂತೆ ಚಾ*ಕು ಇರಿತ

- Advertisement -

Hubli Crime News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳನ್ನು ಮನಬಂದಂತೆ ಚಾಕು ಇರಿದು ಕೊಲೆ ಗೈದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನೇಹಾ ಹಿರೇಮಠ (24) ಸಾವನ್ನಪ್ಪಿದ ಮೃತ ಯುವತಿಯಾಗಿದ್ದು, ಈಕೆ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಮಗಳಾಗಿದ್ದಾಳೆ. ಬಿವಿಬಿಯಲ್ಲಿ MCA ಫಸ್ಟ್ ಇಯರ್’ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆದರೆ ಇಂದು ಕಾಲೇಜಿನಲ್ಲಿ ಪರೀಕ್ಷೆಯಿದ್ದ ತೆರಳಿದ್ದ ವೇಳೆ ಯಾರೋ ದುಷ್ಕರ್ಮಿಯೊರ್ವ ಏಕಾಏಕಿ ಕುತ್ತಿಗೆಗೆ ಚಾಕು ಹಾಕಿದ್ದು, ಬಳಿಕ ಬೆನ್ನು, ಹೊಟ್ಟೆಗೆ ಇರಿದಿದ್ದಾನೆ.

ಅಷ್ಟಾಗಲೇ ನೇಹಾ ರಕ್ತದ ಮಡುವಿನಲ್ಲಿ ಬಿದಿದ್ದು, ಕೂಡಲೇ ಸ್ಥಳೀಯ ಸಹಪಾಠಿಗಳು ಹಾಗೂ ಕಾಲೇಜಿನ ಪ್ರೊಫೆಸರ್’ಗಳು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ.

ಇನ್ನೂ ಕಿಮ್ಸ್ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಷಯ ತಿಳಿದು ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ.

ಕಾಂಗ್ರೆಸ್ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಈ ಮಾತಂಧರ ಕೈಗಿಟ್ಟು ನಿದ್ದೆ ಹೋಗಿದೆ: ಪ್ರೀತಂಗೌಡ

ಯಾವುದೇ ಸಮಯದಲ್ಲೂ ಕರ್ನಾಟಕ ಸದಾ ಕೇರಳದ ಜೊತೆ ಇರಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಸರ್ಕಾರದ ಕುಮ್ಮಕ್ಕು ಇಂಥ ದುಷ್ಟಶಕ್ತಿಗಳಿಗೆ ಇರುವುದು ಸ್ಪಷ್ಟವಾಗಿದೆ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

- Advertisement -

Latest Posts

Don't Miss