Hubballi News : ಕಾಂಗ್ರೆಸ್ ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಈಗ ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಮೇಲೆ ಎಫೆಕ್ಟ್ ಬಿದ್ದಿದ್ದು, ಸಧ್ಯ ನಾಳೆ ದಿನಾಂಕ ಜುಲೈ 31ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಆಟೋ ಬಂದ್ ಕರೆ ನೀಡಿದ್ದಾರೆ.
ಹೌದು,,,, ಹೀಗೆ ಆಟೋದಲ್ಲಿ ಶಕ್ತಿ ಯೋಜನೆ ವಿರೋಧಿಸಿ ಆಟೋ ಬಂದ್ ಎಂದು ಆಟೋಗಳನ್ನು ಬಿತ್ತಿ ಪತ್ರ ಹಚ್ಚಿದ್ರೆ, ಇನ್ನೊಂದೆಡೆ ಮೈಕ್ ಮೂಲಕ ನಾಳೆ ದಿನದಂದು ಹುಬ್ಬಳ್ಳಿ ಧಾರವಾಡದಲ್ಲಿ ಬೆಳಗ್ಗೆ 6 ರಿಂದ ಸಾಯಂಕಾಲ6 ರವರೆಗೆ ಆಟೋ ಬಂದ್ ಇರುತ್ತದೆಂದು ಅನೌನ್ಸ್ ಮಾಡುತ್ತಿರುವ ಆಟೋ ಚಾಲಕರು. ಇದಕ್ಕಾಗೆಲ್ಲ ಒಂದೇ ಕಾರಣ ಅದುವೇ ಶಕ್ತಿ ಯೋಜನೆ.
ಈ ಉಚಿತ ಬಸ್ ಪ್ರಯಾಣದಿಂದ ಒಂದು ಕಡೆ ಮಹಿಳೆಯರು ಫುಲ್ ಖುಷಿಯಿಂದ ಪ್ರಯಾಣ ಮಾಡುತ್ತಿದ್ರೆ, ಇತ್ತ ಆಟೋ ಚಾಲಕರು ಒಂದು ಹೊತ್ತಿನ ದುಡಿಮೆಗಾಗಿ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಗರಗಳಲ್ಲಿನ ಉಚಿತ ಬಸ್ ಪ್ರಯಾಣವನ್ನು ರದ್ದು ಮಾಡಬೇಕು, ಎಲ್ಲ ಆಟೋ ಚಾಲಕರಿಗೆ ಕಾರ್ಮಿಕರ ಕಾರ್ಡ್ ನೀಡಬೇಕೆಂದು ಒತ್ತಾಯಿಸಿ, ನಾಳೆ ಸೋಮವಾರದಂದು ಇಡಿ ಹುಬ್ಬಳ್ಳಿ ಧಾರವಾಡ ಬರೊಬ್ಬರಿ 25 ಸಾವಿರ ಆಟೋ ಚಾಲಕರು ಬಂದ್ ಕರೆ ನೀಡಿದ್ದು, ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೆವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಟ್ನಲ್ಲಿ ಹೇಳಬೇಕೆಂದ್ರೆ ನಾಳೆ ಬಂದ್ ಕರೆ ನೀಡಿರುವ ಆಟೋ ಚಾಲಕರಿಗೆ ಕನ್ನಡಪರ ಸಂಘಟನೆ, ಖಾಸಗಿ ವಾಹನಗಳ ಸಂಘಟನೆ ಕೂಡ ಸಾಥ್ ನೀಡಿದ್ದವಂತೆ.ಈ ಶಕ್ತಿ ಯೋಜನೆ ಜಾರಿಯಾದ ಬಳಿಕ ಆಟೋ ಚಾಲಕರು ಬೀದಿಗೆ ಬಂದಿದ್ದೇವೆ. ನಗರ ಸಾರಿಗೆ ವ್ಯಾಪ್ತಿಯಲ್ಲಿ 20 ಕಿಲೋ ಮೀಟರ್ ಅವಕಾಶ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ