Thursday, September 19, 2024

Latest Posts

Hubballi : ಹುಬ್ಬಳ್ಳಿ ಧಾರವಾಡ ಬೈಪಾಸ್ ಟೋಲ್ ಫ್ರೀ: ಸೆ.7ಕ್ಕೆ ಶುಲ್ಕ ವಸೂಲಿ ಸಂಪೂರ್ಣ ಸ್ಥಗಿತ..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಬೈಪಾಸ್ ನಲ್ಲಿ ಟೋಲ್ ಹಣ ಕಟ್ಟಿ ಕಟ್ಟಿ ಬೇಸತ್ತಿದ ವಾಹನ ಸವಾರರು ಈಗ ನಿಟ್ಟುಸಿರು ಬಿಡುವಂತೆ ಆಗಿದೆ. ಇನ್ನೂ ಎಷ್ಟು ವರ್ಷ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರು ಟೋಲ್ ಪಾವತಿಸಬೇಕ್ರಿ. ಈ ಟೋಲ್ ಪಾವತಿ ಮಾಡಿ ಮಾಡಿಯೇ ಸಾಕಾಗಿದೆ. ಜನರ ಜೇಬು ಖಾಲಿ ಮಾಡುವುದೇ ಸರ್ಕಾರದ ಉದ್ದೇಶವೇ..? ಎಂಬುವಂತೇ ಬೇಸರದ ನುಡಿಗಳನ್ನಾಡಿದ್ದ ವಾಹನ ಸವಾರರಿಗೆ ಈಗ ಖುಷ್ ಖಬರ್ ಕೇಳಿ ಬಂದಿದೆ.

ಒಂದಲ್ಲ ಎರಡಲ್ಲ ಹತ್ತಾರು ಬಗೆಯ ಆಕ್ರೋಶದ ನುಡಿಗಳು ಹು-ಧಾ ಬೈಪಾಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಂದ ಕೇಳಿ ಬರುತ್ತಲೆ ಇವೆ. ಡಬಲ್ ಲೈನ್ ಹೋಗಿ ಸಿಕ್ಸ್ ಲೈನ್ ಆಗುತ್ತಿದೆ. ಸಿಕ್ಸ್ ಲೈನ್ ಆದ ಮೇಲೆಯೇ ಈ ಡಬಲ್ ಲೈನ್ ಶುಲ್ಕ ಪಾವತಿ ಹೊರೆ ಇಳಿಯುತ್ತದೆಯೇ?ಎಂದೂ ಪ್ರಶ್ನಿಸುತ್ತಿದ್ದರು. ಆದರೆ, ಇನ್ನು ಮುಂದೆ ಈ ಆಕ್ರೋಶ ನುಡಿಗಳು, ಬೇಸರ ಇಲ್ಲ. ಹೌದು.. ಹು-ಧಾ ಬೈಪಾಸ್ ರಸ್ತೆ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ (ಟೋಲ್) ಗುತ್ತಿಗೆ ಪಡೆದಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ತನ್ನ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸೆ. 7 ರಿಂದ ಟೋಲ್ ಸಂಗ್ರಹ 7 ಸ್ಥಗಿತಗೊಳಿಸಲಿದೆ.

ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಿದ್ದು, 1998ರಿಂದಲೂ ಈ ಬೈಪಾಸ್‌ ನಿರ್ವಹಣೆ ಮತ್ತು ಟೋಲ್ ಸಂಗ್ರಹಣೆ ಕಾರ್ಯ ನಿರ್ವಹಿಸಿದ್ದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದೆ. ಈ ಕುರಿತು ಸುತ್ತೋಲೆಯನ್ನೇ ತನ್ನ ನೌಕರರಿಗೆ ಹೊರಡಿಸಿರುವ ಕಂಪನಿಯ ಕಾರ್ಯಕಾರಿ ನಿರ್ದೇಶಕ ಶಿವಕುಮಾರ ಖೇಣಿ, ಸೆ. 7 ರಿಂದ ರಸ್ತೆ ಬಳಕೆದಾರರ ಶುಲ್ಕ ಆಕರಣೆ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಿದೆ.

- Advertisement -

Latest Posts

Don't Miss