Wednesday, February 5, 2025

Latest Posts

ಧಾರವಾಡದ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ, ಅಕ್ಷಯ್‌ ಕುಮಾರ್‌ಗೆ ಆಹ್ವಾನ

- Advertisement -

ಧಾರವಾಡ: ಜನವರಿ 12 ರಿಂದ 16ರವರೆಗೆ ಹುಬ್ಬಳ್ಳಿ, ಧಾರವಾಡದಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು. ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಯುವ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 12 ರಂದು ಮಧ್ಯಾಹ್ನ 1:30ಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟರಿಗೂ ಆಹ್ವಾನ ನೀಡಲಾಗುತ್ತಿದೆ ಎಂದು ಹೇಳಿದರು. ಜೋಶಿ ಅವರು ಸ್ಥಳದಲ್ಲೇ ನಟ ಅಕ್ಷಯಕುಮಾರ್ ಅವರಿಗೆ ಕರೆ ಮಾಡಿ ಯುವ ಜನೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಪ್ರಧಾನಮಂತ್ರಿಗಳು ಆಗಮಿಸುತ್ತಿರುವುದರಿಂದ ನೀವೂ ಕಾರ್ಯಕ್ರಮಕ್ಕೆ ಬರಬೇಕು ಎಂದು ಜೋಶಿ ಮನವಿ ಮಾಡಿದರು. ಆದರೆ, ಅಕ್ಷಯ್‌ ಕುಮಾರ್‌ ಅವರು ಲಂಡನ್‌ಗೆ ಹೊರಟಿರುವುದಾಗಿ ತಿಳಿಸಿದ್ದಾರೆ.

ಅಮೇರಿಕಾದಲ್ಲಿನ ಹಿಮ ಚಂಡಮಾರುತಕ್ಕೆ 31 ಜನರು ಬಲಿ

ಪೋಸ್ಟ್ ಕೋವಿಡ್ ನಂತರ ಮೊದಲ ಬಾರಿಗೆ ಮೋದಿ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಕವಿವಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಉದ್ಘಾಟನೆ ಕಾರ್ಯಕ್ರಮದ ಸ್ಥಳ ಇನ್ನೂ ಅಂತಿಮಗೊಂಡಿಲ್ಲ. ಅವಳಿನಗರದ ಎಲ್ಲ ಕಡೆಯೂ ವೇದಿಕೆ ಮಾಡಲಿದ್ದೇವೆ. ಅಲ್ಲದೇ ಐಐಟಿ ಉದ್ಘಾಟನೆ, ಹುಬ್ಬಳ್ಳಿ ರೈಲ್ವೆ ಫ್ಲಾಟ್‌ಫಾರ್ಮ್ ಸೇರಿ ಹಲವು ಉದ್ಘಾಟನಾ ಕಾರ್ಯಕ್ರಮಗಳೂ ಅಂದು ಮೋದಿ ಅವರಿಂದ ನಡೆಯಲಿವೆ ಎಂದು ಜೋಶಿ ಅವರು ಹೇಳಿದರು. ಧಾರವಾಡದ ವಿವಿಧ ಮೈದಾನಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಧಾರವಾಡದ ಕೆಸಿಡಿ ಮೈದಾನ, ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಮೈದಾನ, ಗೋಲ್ಡನ್ ಜ್ಯುಬಿಲಿ ಹಾಲ್ ಸೇರಿದಂತೆ ಹಲವು ಕಡೆ ಭೇಟಿ ನೀಡಿದ ನಂತರ ಸಚಿವರು, ಯಾವ ಜಾಗದಲ್ಲಿ ಯುವ ಜನೋತ್ಸವ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಲಿದ್ದಾರೆ.

ಕೋಲಾರ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ : ಜೆಡಿಎಸ್ ಅಭ್ಯರ್ಥಿ ಸಿ.ಎಮ್.ಆರ್. ಶ್ರೀನಾಥ್

ಚೀನಾದಲ್ಲಿ ಹೆಚ್ಚಿದ ಕೊರೋನಾ ಪ್ರಕರಣಗಳು : ರಾಜ್ಯಗಳಿಗೆ ‘ಕೋವಿಡ್ ಪರಿಶೀಲನಾಪಟ್ಟಿ’ ಕಳುಹಿಸಿದ ಕೇಂದ್ರ

- Advertisement -

Latest Posts

Don't Miss