www.karnatakatv.net: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ 478 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಹಾನಗರಪಾಲಿಕೆಯ 82 ವಾರ್ಡ್‍ಗಳಿಗೆ ಒಟ್ಟು ಇಲ್ಲಿಯವರೆಗೆ 577 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದರಿಂದ ಒಂದೇ ದಿನ 478 ನಾಮಪತ್ರಗಳು ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ಒಟ್ಟು 577 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟಾರೆಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್-112, ಬಿಜೆಪಿ-121, ಜೆಡಿಎಸ್-55, ಎಎಪಿ-46, ಉತ್ತಮ ಪ್ರಜಾಕಿಯ-13, ಕರ್ನಾಟಕ ರಾಷ್ಟ್ರ ಸಮಿತಿ-6, ಎ.ಐ.ಎಮ್.ಐ.ಎಮ್-13, ಎಸ್.ಡಿ.ಪಿ.ಐ-4 , ಬಿಎಸ್‍ಪಿ -7, ಆರ್‍ಪಿಐ (ಎ)-4, ಭಾರತ ಕಮ್ಯುನಿಷ್ಟ್ ಪಾರ್ಟಿ-1, ಕರ್ನಾಟಕ ಶಿವಸೇನಾ-5, ಕರ್ನಾಟಕ ಜನಸೇನಾ ಶಕ್ತಿ-1 ಮತ್ತು ಪಕ್ಷೇತರರು-189 ಜನ ಸೇರಿ ಒಟ್ಟು 577 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಅತ್ಯಂತ ಕಡಿಮೆ ನಾಮಪತ್ರ (2) ವಾರ್ಡ ಸಂಖ್ಯೆ 14ಕ್ಕೆ ಮತ್ತು ಅತಿ ಹೆಚ್ಚು ನಾಮಪತ್ರಗಳು (16) ವಾರ್ಡ್ ಸಂಖ್ಯೆ 24 ಮತ್ತು 28ಕ್ಕೆ ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂತೆಗೆದುಕೊಂಡ ಮೇಲೆ ಕಣದಲ್ಲಿ ಎಷ್ಟು ಜನ ಉಳಿಯುತ್ತಾರೆ ಎಂಬುದರ ಮೇಲೆ ನಿಜವಾದ ಹಣಾಹಣಿ ಏರ್ಪಡಲಿದೆ.
ಕರ್ನಾಟಕ ಟಿವಿ- ಹುಬ್ಬಳ್ಳಿ