ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಮುಸ್ಲಿಂ ಸಮುದಾಯದಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶಾಂತಿ ನಡಿಗೆ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಗಣಪತಿ ಹಬ್ಬದ ಬೆನ್ನಲ್ಲೇ ಮತ್ತೊಂದು ಸೌಹಾರ್ದತೆಗೆ ಪ್ರತೀಕವಾಗಿ ಇಂತಹದೊಂದು ಆಚರಣೆ ಮಾಡಲಾಯಿತು.
ಹೌದು..ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈದ್ ಮಿಲಾದ್ ಹಬ್ಬದಂದು ನಡೆಯುತ್ತಿರುವ ಮೆರವಣಿಗೆ ಈ ಬಾರಿ ಅದ್ದೂರಿಯಾಗಿ ನಡೆಯಿತು. ನಿನ್ನೆ ಹುಬ್ಬಳ್ಳಿಯಲ್ಲಿ ಸಾರ್ವತ್ರಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಿನ್ನಲೆ ಇಂದು ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ನಗರದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಒಂದು ದಿನ ಮೆರವಣಿಗೆ ಮುಂದೂಡ್ಡಿದ್ದ ಅಂಜುಮನ್ ಹಾಗೂ ಮುಸ್ಲಿಂ ಸಮುದಾಯದ ನಾಯಕರು ಅದ್ದೂರಿಯಾಗಿ ಮೆರವಣಿಗೆ ಮಾಡಿದ್ದಾರೆ.
ಇನ್ನೂ ಮೆರವಣಿಗೆಯು ದಾರಲ್ ಉಲ್ಲಮ್ ಗೌಸಿಯಾದಿಂದ ಪ್ರಾರಂಭಿಸಿದ್ದು, ಯಲ್ಲಾಪೂರ ಓಣಿ, ಪೆಂಡಾರ ಗಲ್ಲಿ, ದುರ್ಗದ ಬೈಲ್, ಮುಲ್ಲಾ ಓಣಿ, ಕೌಲ ಪೇಟ್, ನ್ಯೂ ಇಂಗ್ಲಿಷ್ ಸ್ಕೂಲ್ ಮುಖಾಂತರ ಮೆರವಣಿಗೆ ನಡೆಸಲಾಯಿತು. ಹಳೆ ಹುಬ್ಬಳ್ಳಿಯ ಆಸಾರ ಮೊಹಲ್ಲಾದಲ್ಲಿ ಪ್ರವಾದಿಗಳ ಕೇಶ (ಕೂದಲು) ದರ್ಶನದೊಂದಿಗೆ ಮೆರವಣಿಗೆ ವಿದಾಯ ನೀಡಲಾಯಿತು.
Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!
Cauvery Water : ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಫ್ಲೈಟ್ ಹತ್ತಿದ ಡಿ ಬಾಸ್…!