ಆಜಾದೀ ಕಾ ಅಮೃತ್ ಮಹೋತ್ಸವದ ಈ ಸಂದರ್ಭದಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇಂದು ರಾಷ್ಟ್ರಧ್ವಜ ಹಾರಾಟ ವಿಶೇಷವಾಗಿತ್ತು.
ರಾಷ್ಟ್ರಧ್ವಜ ಹಾರಿಸುವ ವಿಚಾರ ಬಂದಾಗ ಹುಬ್ಬಳ್ಳಿ ಈದ್ಗಾ ಮೈದಾನ ಹಿಂದಿರುವ ರಣ ರೋಚಕ ಇತಿಹಾಸ ಮರೆಯಲು ಸಾಧ್ಯವೇ.? ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರಧ್ವಜ ಹಾರಿಸಲು ಮುವತ್ತು ವರ್ಷಗಳ ಹಿಂದೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೊಡ್ಡ ಹೋರಾಟವನ್ನೇ ಮಾಡಬೇಕಾಯ್ತು.
ಹರ್ ಘರ್ ತಿರಂಗಾ ಅಭಿಯಾನದಡಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಷ್ಟ್ರಧ್ವಜ ಹಿಡಿದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೆಜ್ಜೆಯಿಟ್ಟಾಗ ಹಳೆಯ ನೆನಪುಗಳು ಕಾಡಿದವು. ಅಂದು ಇದೇ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ನಡೆಸಿದ ಆಂದೋಲನ, ಪೊಲೀಸರ ಲಾಠಿ ಏಟು ತಿಂದು ಜೈಲು ಸೇರಿದ್ದನ್ನ ಸ್ಮರಿಸಿಕೊಂಡರು.
ಅಮೃತ ಮಹೋತ್ಸವದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು ಜೋಶಿ ಅವರಿಗೆ ಅವೀಸ್ಮರಣೀಯವಾಗಿತ್ತು. ರಾಷ್ಟ್ರದ್ವಜವನ್ನು ಹಾರಿಸಲು ಮುವತ್ತು ವರ್ಷದ ಹಿಂದೆ ಅವಕಾಶ ನೀಡದ ಕಾಂಗ್ರೆಸ ಪಕ್ಷದ ರಾಷ್ಟ್ರವಿರೋಧಿ ನೀತಿಯನ್ನು ಅನುಸರಿಸಿತ್ತು. ಅಂದು ಆರು ಜನ ಅಮಾಯಕ ರಾಷ್ಟ್ರ ಹಾಗೂ ರಾಷ್ಟ್ರಧ್ವಜ ಭಕ್ತರನ್ನ ಹುತಾತ್ಮರಾಗಿಸಿದ ಹೋರಾಟವನ್ನ ಪ್ರಲ್ಹಾದ್ ಜೋಶಿ ನೆನಪಿಸಿಕೊಂಡರು.
ಇಂದು ಅದೇ ಮೈದಾನದಲ್ಲಿ ಸಹಸ್ರಾರು ರಾಷ್ಟ್ರಭಕ್ತರು, ಶಾಲಾ ಮಕ್ಕಳೊಂದಿಗೆ ಬೃಹತ್ ತ್ರಿವರ್ಣ ಧ್ವಜ ಹಾರಿಸಲಾಯಿತು.
ಇದೇ ವೇಳೆ ಹುಬ್ಬಳ್ಳಿ ನಗರದ ತೊರವಿಗಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರಲ್ಹಾದ್ ಜೋಶಿ ಕುಟುಂಬ ಸಮೇತವಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಠದ ಅರ್ಚಕರಿಗೆ ತ್ರಿವರ್ಣ ಧ್ವಜವನ್ನು ನೀಡಿ ಹರ್ ಘರ್ ತಿರಂಗಾ ಅಭಿಯಾನದ ಸಲುವಾಗಿ ಮಠದಲ್ಲಿ ತಿರಂಗಾ ಹಾರಿಸುವಂತೆ ಕೋರಿದರು.
ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ? – ಬಿಜೆಪಿ ಪ್ರಶ್ನೆ