Saturday, November 23, 2024

Latest Posts

Eye care ಸಾರ್ವಜನಿಕರೇ ಎಚ್ಚರ ನಿಮ್ಮ ಕಣ್ಣಿನ ಕಾಳಜಿ ಅಗತ್ಯ: ಮದ್ರಾಸ್ ಐ ನಿಂದ ಮುಕ್ತಿಗಾಗಿ ಜಾಗೃತಿ…!

- Advertisement -

ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ..! ಎಚ್ಚರ..! ಎಚ್ಚರ..! ಕೋವಿಡ್ ಸಂದರ್ಭದಲ್ಲಿ ವಹಿಸಿದ್ದ ಆರೋಗ್ಯ ಕಾಳಜಿ ಮತ್ತೇ ವಹಿಸಬೇಕಿದೆ. ಏನಾದರೂ ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಿದೆ. ಸೋಶಿಯಲ್ ಡಿಸ್ಟೆನ್ಸ್ ಅವಶ್ಯಕವಾಗಿದೆ. ಅರೇ ಏನಿದು ಅಂತ ಆತಂಕಗೊಂಡಿದ್ದೀರಾ ತೋರಿಸ್ತಿವಿ ನೋಡಿ..

ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಗ್ಯೂ, ಚಿಕನ್ ಗುನ್ಯಾನಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ, ಇತ್ತೀಚೆಗೆ ಹೊಸದಾಗಿ ಮದ್ರಾಸ್‌ ಐ ಎಂಬ ಕಣ್ಣು ನೋವಿನ ಬಾಧೆ ಜಿಲ್ಲೆಯ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ. ಹೌದು.. ಡೆಂಗ್ಯೂ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳಿಂದ ಬಂದರೆ ಅಡಿನೊ ವೈರಾಣುವಿನಿಂದ ಮದ್ರಾಸ್‌ ಐ(Madras eye virus) ಎಂಬ ರೋಗ ಹರಡುತ್ತಿದೆ. ದಿನದಿಂದ ದಿನಕ್ಕೆ ಧಾರವಾಡ ಜಿಲ್ಲಾದ್ಯಂತ ಹೆಚ್ಚಳವಾಗುತ್ತಿದ್ದು, ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವ ಕಾರಣ ಜನರಲ್ಲಿ ಭಯ ಮೂಡಿಸಿದೆ. ಹವಾಮಾನ ವೈಪರೀತ್ಯದಿಂದ ಮತ್ತು ನಿರಂತರ ಮಳೆಯಿಂದಾಗಿ ಈ ರೋಗ ಬರುತ್ತಿದ್ದು, ಮಳೆಗಾಲ ಮುಗಿಯುವವರೆಗೂ ವಿಶೇಷವಾಗಿ ಮಕ್ಕಳು ತುಸು ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇನ್ನೂ ಈ ರೋಗ ಬಂದಾಗ ವ್ಯಕ್ತಿಯ ಎರಡು ಕಣ್ಣುಗಳಲ್ಲಿ ಉರಿ ಬರುತ್ತದೆ. ಊತದ ಸಮಸ್ಯೆ ಕಂಡು ಬರುತ್ತಿದೆ. ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಿಂದ ನಿರಂತರವಾಗಿ ನೀರು ಬರುವುದು, ಕಣ್ಣಲ್ಲಿ ಪಿಚ್ಚು ಬರುವುದು ಮತ್ತು ಕಣ್ಣು ಊದಿಕೊಳ್ಳುವುದು ಮದ್ರಾಸ್‌ ಐ ನ ಮುಖ್ಯ ಲಕ್ಷಣಗಳಾಗಿವೆ. ಮದ್ರಾಸ್‌ ಐ ಪೀಡಿತ ಜನರಿಗೆ ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಫ್ಸ್‌ ನೀಡುವುದು ಮತ್ತು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಅಥವಾ ಕಪ್ಪು ಕನ್ನಡಕ ಧರಿಸಬೇಕಾಗುತ್ತದೆ. ಆಗಾಗ ಕೈ ತೊಳೆಯುವುದು, ಅನಗತ್ಯವಾಗಿ ಇತರ ವಸ್ತು ಮುಟ್ಟದಿರುವುದು, ಕಣ್ಣು ಒರೆಸಲು ಪ್ರತ್ಯೇಕ ವಸ್ತ್ರ ಅಥವಾ ಮೆತ್ತನೆಯ ಬಟ್ಟೆ ಬಳಸುವುದು ಹಾಗೂ ಆದಷ್ಟು ಜನನಿಬಿಡ ಸ್ಥಳದಿಂದ ದೂರವಿರುವುದು ಉತ್ತಮ. ಕಣ್ಣು ಕೆಂಪಾದಾಗ ಆಂಟಿಬಯಾಟಿಕ್‌ ಔಷಧಿ ಬಳಸಬೇಕು. ಕಣ್ಣನ್ನು ಆಗಾಗ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದು ಮುನ್ನೆಚ್ಚರಿಕೆ ಕ್ರಮಗಳಲ್ಲಿ ಪ್ರಮುಖ.

ಮದ್ರಾಸ್‌ ಐ ವೈರಾಣು ಹೆಚ್ಚಾಗಿ 20 ರಿಂದ 35 ವಯೋಮಾನದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಹಾಸ್ಟೆಲ್‌, ಪಿಜಿಗಳಲ್ಲಿ ವಾಸಿಸುವ ಯುವಕ-ಯುವತಿಯರಲ್ಲಿ ಕಂಡು ಬರುತ್ತಿದೆ. ಇಂತಹವರು ವಾಸ ಸ್ಥಳದಲ್ಲಿ ಇತರರೊಂದಿಗೆ ಸುರಕ್ಷಿತ ಅಂತರ, ನೈರ್ಮಲ್ಯ, ಸ್ವಚ್ಛತೆ ಕಾಪಾಡಿಕೊಂಡು, ಆಗಾಗ ಕೈ ತೊಳೆದು ಕೊಳ್ಳಬೇಕು.

Jagadish Shetter: ಪಕ್ಷ ಸಂಘಟನೆಯ ಕುರಿತು ಚರ್ಚಿಸಲು ದೆಹಲಿಗೆ ಜಗದೀಶ್​ ಶೆಟ್ಟರ್.

Arun Kumar Puttila : ಉಪ್ಪಿನಂಗಡಿ ಹೆದ್ದಾರಿ ಕಾಮಗಾರಿಯಿಂದ ದುರ್ನಾತ ಸಮಸ್ಯೆ: ಅರುಣ್ ಪುತ್ತಿಲ ಭೇಟಿ ನಂತರ ಎಚ್ಚೆತ್ತ ಅಧಿಕಾರಿಗಳು

Rain : ಕುಂದಾಪುರ : ಭಾರೀ ಮಳೆಗೆ ಅಪಾರ ಹಾನಿ, ಕೃಷಿ ನಾಶ, ಮನೆಗೆ ಹಾನಿ..!

- Advertisement -

Latest Posts

Don't Miss