Tuesday, July 22, 2025

Latest Posts

Flag Fight: ಟವರ್ನಲ್ಲಿ ಇಸ್ಲಾಂ ಬಾವುಟದ ಕೆಳಗೆ ಭಗವಾ ಧ್ವಜ ಕಟ್ಟಿದ ಆರೋಪ,

- Advertisement -

ಹುಬ್ಬಳ್ಳಿ : ಟವರ್ ಮೇಲೆ ಇಸ್ಲಾಂ ಧರ್ಜ ಹಾರಿಸಿ ಅದರ ಕೆಳಗೆ ಕೇಸರಿ ಧ್ವಜ ಕಟ್ಟಿ ಅಶಾಂತಿ ಸೃಷ್ಟಿಸುವ ಹುನ್ನಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ (Hindu Jagarana Vedik) ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಹಳೇ ಹುಬ್ಬಳ್ಳಿ ಪೊಲೀಸರು ಟವರ್ನಲ್ಲಿದ್ದ ಧ್ವಜಗಳನ್ನು ತೆರವುಗೊಳಿಸಿದ್ದಲ್ಲದೆ, ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ನಗರಯಲ್ಲಿ ಅಶಾಂತಿ ಕದಡುವ ಯತ್ನ ನಡೆದಿದೆ, ಟವರ್ ಮೇಲೆ ಇಸ್ಲಾಂ ಧ್ವಜ ಹಾರಿಸಿ ಅದರ ಕೆಳಗೆ ಕೇಸರಿ ಧ್ವಜ ಕಟ್ಟಲಾಗಿದ್ದು, ಇದನ್ನು ವ್ಯಕ್ತಿಯೊಬ್ಬನೇ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಹಿಂಜಾವೇ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಪೊಲೀಸರು ಧ್ವಜಗಳನ್ನು ತೆರವುಗೊಳಿಸಿದ್ದಾರೆ.

ಹುಬ್ಬಳ್ಳಿಯ ಆನಂದನಗರದ ಗೋಡ್ಕೆ ಫ್ಲ್ಯಾಟ್ನಲ್ಲಿರುವ ಟವರ್ ಮೇಲೆ ಇಸ್ಲಾಂ ಧರ್ಮದ ಬಾವುಟದ ಕೆಳಗೆ ಭಗವಾ ಧ್ವಜ ಕಟ್ಟಲಾಗಿದೆ. ಈ ಎರಡು ಬಾವುಟಗಳನ್ನು ಒಬ್ಬನೇ ಕಟ್ಟಲಾಗಿದೆ. ಅಲ್ಲದೆ, ಇದು ಜಿಹಾದಿ ಕೆಲಸವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿತ್ತು.

ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಧ್ವಜಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳದಲ್ಲೇ ಪೊಲೀಸರು ಬೀಡುಬಿಟ್ಟಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕಾಮಾರ ಅವರು ಮಾಹಿತಿ ಸಂಗ್ರಹಿಸಿದ್ದಾರೆ.

ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು, ಗೋಡ್ಕೆ ಪ್ಲಾಟ್ನಲ್ಲಿರುವ ಏರಟೆಲ್ ಟವರ್ ಮೇಲೆ ಎರಡು ಧರ್ಮದ ಬಾವುಟ ಹಾರಿಸಿದ್ದಾರೆ. ಅದರಲ್ಲಿ ಧ್ವಜ ಏರುಪೇರಿದೆ ಎಂದು ದೂರು ಕೊಟ್ಟಿದ್ದಾರೆ. ಎರಡು ಧರ್ಮದವರಿಗೆ ತೊಂದರೆ ಕೊಡಬೇಕೆಂದು ಕಿಡಗೇಡಿ ಇಂದು ದ್ವಜಗಳನ್ನು ಕಟ್ಟಿದ್ದಾರೆ. ಆದರೆ ಅದು ಪಾಕಿಸ್ತಾನ ಧ್ವಜ ಅಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಆರೋಪಿ ಬಂಧನಕ್ಕೆ ತನಿಖೆ ಕೈಗೊಳ್ಳಲಾಗಿದೆ ಎಂದರು.

 

- Advertisement -

Latest Posts

Don't Miss