Thursday, November 21, 2024

Latest Posts

Hubli: ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಬಗ್ಗೆ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಭೆ

- Advertisement -

Hubli Political News: ರಾಜ್ಯದಲ್ಲಿ ಹಾಲಿ-ಮಾಜಿಗಳ ಸಮಾಗಮದಲ್ಲಿ ಮತ್ತೊಂದು ಸಂಘಟನೆ ಆರಂಭವಾಗಿದ್ದು, ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹುಬ್ಬಳ್ಳಿಯಲ್ಲಿಂದು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು.

ಸಭೆ ಬಳಿಕ ಮಾತನಾಡಿದ ಈಶ್ವರಪ್ಪ, ಹಿಂದುಳಿದವರಿಗೆ, ದಲಿತರಿಗೆ, ಬಡವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಒಂದು ಪ್ರಬಲ ಸಂಘಟನೆ ಆಗಬೇಕು..ಈ‌ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸಭೆ‌. ಬ್ರಾಹ್ಮಣ ,ಲಿಂಗಾಯತರು, ದಲಿತರು, ಹಿಂದೂಳಿದ ವರ್ಗದವರು ಸೇರಿದಂತೆ ಎಲ್ಲಾ ಸಮುದಾಯದ ನಾಯಕರು ಇದ್ದಾರೆ. ಪಕ್ಷಾತೀತವಾಗಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಕ್ಟೋಬರ್ 20 ರಂದು ಬೆಳಗ್ಗೆ 11 ಗಂಟೆ ಬಾಗಲಕೋಟೆಯಲ್ಲಿ ಮತ್ತೊಂದು ಸಭೆಯಿದೆ. ಇದರಲ್ಲಿ 35 ಸ್ವಾಮೀಜಿಗಳು, ವಿವಿಧ ಸಮುದಾಯದ ಮುಖಂಡರು ಭಾಗಿಯಾಗಲಿದ್ದಾರೆ.ಆರ್ ಸಿಬಿ ಸಂಘಟನೆ ಬಗ್ಗೆ ಬಾಗಲಕೋಟೆಯಲ್ಲಿ ಚರ್ಚೆ ಮಾಡಲಾಗುತ್ತದೆ.

ಚೆನ್ನಮ್ಮ ಮತ್ತು ರಾಯಣ್ಣರನ್ನು ಜ್ಯಾತಿಗೆ ಸೀಮಿತವಲ್ಲಾ. ಅವರ ಹೆಸರಿನಲ್ಲಿ ಸಂಘಟನೆ ಆರಂಭಿಸಿ ರಾಷ್ಟ್ರದ್ರೋಹಿಗಳನ್ನ ಮಟ್ಟಹಾಕಬೇಕೆಂಬುವುದು ನಮ್ಮ ಉದ್ದೇಶ. ನಮ್ಮ ಸಂಘಟನೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಹ ಕೈಜೋಡಿಸಿದ್ದಾರೆ. ಇದು ಯಾವುದೇ ರಾಜಕೀಯಕ್ಕೆ ಸಂಘಟನೆ ಅಲ್ಲಾ. ನೊಂದವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಈ ಸಂಘಟನೆ ಆರಂಭವಾಗುತ್ತದೆಂದರು.

ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು

- Advertisement -

Latest Posts

Don't Miss