ಹುಬ್ಬಳ್ಳಿ: ಸಾಲ ಪಡೆದುಕೊಂಡರೆ ನೀವು ಹತ್ತು ವರ್ಷ ಹಣ ವಾಪಸ್ಸು ನೀಡಿದರೂ ಸಾಲ ತೀರುವುದಿಲ್ಲ. ಏಕೆಂದರೆ ಅಲ್ಲಿ ನಡೆಯುತ್ತಿರುವುದು ಮೀಟರ್ ಬಡ್ಡಿ ವ್ಯವಹಾರ. ನೀವೇನಾದರೂ ಒಂದು ಲಕ್ಷ ಸಾಲ ಪಡೆದುಕೊಂಡರೆ ವಾರಕ್ಕೆ ಹತ್ತು ಸಾವಿರ ಬಡ್ಡಿ ಕಟ್ಟಬೇಕಂತೆ.
ಹುಬ್ಬಳ್ಳಿ : ಜನರು ಅರ್ಥಿಕ ಸಂಕಷ್ಟದ ಸಮಯದಲ್ಲಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಸಂಸಾರದ ತಕ್ಕಡಿಯನ್ನು ತೂಗುತ್ತಾರೆ ಕೆಲವು ದಿನಗಳ ನಂತರ ದುಡಿದು ಕಂತಿನ ರೂಪದಲ್ಲಿ ಸಾಲವನ್ನು ಮರು ಪಾವತಿ ಮಾಡುತ್ತಿರುತ್ತಾರೆ. ಸಾಲವನ್ನು ಮರು ಪಾವತಿ ಮಾಡುವಾಗ ಬಡ್ಡಿಯನ್ನು ಸಹ ಹಿಂದಿರುಗಿಸುತ್ತಾರೆ. ಇದು ಒಂದು ರೀತಿಯಲ್ಲಿ ನ್ಯಾಯಯುತವಾದ ಬಡ್ಡಿ ವ್ಯವಹಾರ ಆದರೆ ಹುಬಳ್ಳಿಯಲ್ಲಿ ಬೇರೆಯದೇ ರೀತಿಯಲ್ಲಿ ಬಡ್ಡಿ ವ್ಯವಹಾರ ಮಾಡಲು ಹೊರಟಿದೆ.
ಜಿಲ್ಲೆಯಲ್ಲಿ ಮೀಟರ್ ಬಡ್ಡಿ ಲೆಕ್ಕದಲ್ಲಿ ಸಾಲವನ್ನು ನೀಡಲಾಗುತ್ತದೆ. ನೀವು ಕೆಲಸ ಮಾಡಿ ಮಾಡದೆ ಇರಿ ಆದರೆ ಮೀಟರ್ ಲೆಕ್ಕದಲ್ಲಿ ಬಡ್ಡಿಯನ್ನು ಕಟ್ಟಲೇಬೇಕು. ಹುಬ್ಬಳ್ಳಿಯ ಆನಂದ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳು ಮನೆ ನಿರ್ವಹಣೆಗಾಗಿ ಒಬ್ಬ ಸಾಹುಕಾರನ ಹತ್ತಿರ ಒಂದು ಲಕ್ಷ ಸಾಲವನ್ನು ಪಡೆದಿರುತ್ತಾಳೆ ಪ್ರತಿ ತಿಂಗಳು ಸರಿಯಾಗಿ ಸಾಲ ಮರು ಪಾವತಿ ಮಾಡುತ್ತಿರುತ್ತಾಳೆ ಆದರೆ ಕೆಲವು ದಿನಗಳಿಂದ ಕೆಲಸಕ್ಕೆ ಹೋಗದ ಕಾರಣ ಬಡ್ಡಿಯನ್ನು ಕಟ್ಟಿರುವುದಿಲ್ಲ ಆದರೆ ಸಾಲ ಕೊಟ್ಟವರು ಕೆಲಸಕ್ಕೇ ಹೋಗದೆ ಇದ್ದರೂ ಬಡ್ಡಿಯನ್ನು ಕಟ್ಟಲೇಬೇಕು ಎಂದು ದಮ್ಕಿ ಹಾಕುತ್ತಿದ್ದಾರೆ ಅವರು ಮಾತ್ರವಲ್ಲದೇ ಸಾಲಕ್ಕೆ ಸಂಬಂಧವಿಲ್ಲದಿರುವವರು ಕೂಡಾ ಬಡ್ಡಿಯನ್ನು ಕಟ್ಟುವಂತೆ ಬೆದರಿಕೆ ನೀಡುತ್ತಿದ್ದಾರೆ. ಇಲ್ಲದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ.
ಆದರೆ ಇದುವರೆಗೂ ಪೊಲೀಸರು ಬಡ್ಡಿ ವ್ಯವಹಾರ ಮಾಡುವವರು ವಿರುದ್ದ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇನ್ನೂ ಮುಂದಾದರೂ ಜಿಲ್ಲೆಗೆ ನೂತನವಾಗಿ ಆಯ್ಕೆಯಾಗಿರುವ ಕಮಿಷನರ್ ಕ್ರಮು ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Ration card: ರಾಜ್ಯದಲ್ಲಿ 4.59 ಲಕ್ಷ ಬಿಪಿಎಲ್ ಕಾರ್ಡ್ ಡಿಲೀಟ್: ನಕಲಿ ದಾಖಲೆ ನೀಡಿದರೇ ದಂಡ ಫಿಕ್ಸ್..!
Ganesh Utsava: ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು- ಭಾವೈಕ್ಯತೆ ಮೆರೆಯುತ್ತಿರುವ ಸುಮನ್..!