Hubli News : ಹುಬ್ಬಳ್ಳಿ : ಪತಿಯೇ ಪತ್ನಿಯ ತಲೆಗೆ ಕೊಡಲಿಯಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿಂದು ಜುಲೈ.10 ಬೆಳಿಗ್ಗೆ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.
ಮೊನ್ನೆಯಷ್ಟೇ ಪತಿರಾಯ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಇಂದು ಬೆಳ್ಳಂಬೆಳಿಗ್ಗೆ ಮತ್ತೊಮ್ಮೆ ನೆತ್ತರು ಹರಿದಿದ್ದು, ಭೀಕರ ಘಟನೆಗೆ ವಾಣಿಜ್ಯ ನಗರೀ ಹುಬ್ಬಳ್ಳಿ ಸಾಕ್ಷಿಯಾಗಿದೆ. ಭೀಮಪ್ಪ ಮುತ್ತಲಗಿ ಎಂಬಾತನೇ ತನ್ನ ಪತ್ನಿ ಮಂಜುಳಾಗೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯು ಭೀತಿಗೊಂಡು ತಾನೇ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಕೌಟುಂಬಿಕ ಕಲಹವೆಂದು ತಿಳಿದು ಬಂದಿದ್ದು, ಈ ಕುರಿತಂತೆ ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ.ಪಾಟೀಲ್, ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಬನ್ನಿಕೊಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ತನಿಖೆ ಚುರುಕುಗೊಂಡಿದೆ.
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ



