ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ದೊಡ್ಡ ಕೊಡುಗೆಯಾಗಿದ್ದ ಪಾರ್ಕಿಂಗ್ ವಸೂಲಿ ಹಣ ಸ್ಟಾಫ್ ಆಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಆರ್ಥಿಕ ಸಮಸ್ಯೆಗೆ ದೊಡ್ಡ ಹೊರೆಯಾಗಿದೆ. ಕೆಲವೊಂದು ನ್ಯೂನತೆಗಳ ಮಧ್ಯದಲ್ಲಿಯೂ ಪಾಲಿಕೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪಾರ್ಕಿಂಗ್ ಹಾಕಿ ಹಣವನ್ನು ಪಾಲಿಕೆಗೆ ಸಂದಾಯ ಮಾಡಿಕೊಳ್ಳುತಿತ್ತು. ಈಗ ಸ್ಥಗಿತಗೊಂಡ ಹಿನ್ನೆಲೆ ಬೊಕ್ಕಸಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಹೌದು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಕಡೆಯಲ್ಲಿ ಅಂದರೇ ಕೊಪ್ಪಿಕರ ರೋಡ್, ದುರ್ಗದ ಬೈಲ್ ಸೇರಿದಂತೆ ಅವಳಿನಗರದಲ್ಲಿ ಟೆಂಡರ್ ನೀಡುವ ಮೂಲಕ ಪಾಲಿಕೆಗೆ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡಿಕೊಳ್ಳುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಪಾರ್ಕಿಂಗ್ ಟೆಂಡರ್ ಆಗದೇ ಇರುವುದು ಸಾರ್ವಜನಿಕರಿಗೆ ಒಳ್ಳೆಯದೇ ಆಗಿದೆ. ಆದರೆ ಪಾಲಿಕೆಗೆ ಮಾತ್ರ ಆರ್ಥಿಕ ಹೊಡೆತ ಬಿದ್ದಿದೆ.
ಇನ್ನೂ ಪಾಲಿಕೆಗೆ ಸುಮಾರು ದಿನಗಳಿಂದ ಪಾರ್ಕಿಂಗ್ ಸಂಬಂಧಿಸಿದ ಹಣ ಸಂದಾಯವಾಗದೇ ಇರುವುದು ಸಾಕಷ್ಟು ಆರ್ಥಿಕ ಹೊರೆಯಾಗಿದೆ. ಈ ಹಿಂದೇ ಇದ್ದ ಪಾಲಿಕೆ ಮಹಾಪೌರರು ಹಾಗೂ ಹಾಲಿ ಮಹಾಪೌರರು ಈ ಬಗ್ಗೆ ಕಾಳಜಿ ತೋರದೇ ಇರುವುದು ಇಂತಹದೊಂದು ಅವ್ಯವಸ್ಥೆಗೆ ಕಾರಣವಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ದ್ವನಿ ಎತ್ತುವ ಮೂಲಕ ವ್ಯವಸ್ಥೆ ಸರಿಪಡಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ವಿಪಕ್ಷ ನಾಯಕಿ ಭರವಸೆ ನೀಡಿದರು.
ಒಟ್ಟಿನಲ್ಲಿ ಪಾಲಿಕೆಯ ಆರ್ಥಿಕ ವ್ಯವಸ್ಥೆ ಹದಗೆಡಿಸಲು ರಾಜಕೀಯ ಪಕ್ಷಗಳು ಕುತಂತ್ರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಜನಪ್ರತಿನಿಧಿಗಳು ಜನರ ಹಿತವನ್ನು ಕಾಪಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
Lorry: ರಸ್ತೆ ಕುಸಿತದಿಂದಾಗ ಲಾರಿ ಸಿಲುಕಿ ಹೊರ ತೆಗೆಯಲು ಚಾಲಕ ಹರಸಾಹಸ
Gruha laxmi: ಮಳೆಯನ್ನೂ ಲೆಕ್ಕಿಸದೆ ಅರ್ಜಿಯನ್ನು ಸಲ್ಲಿಸಲು ಕೊಡೆಹಿಡಿದು ನಿಂತ ಮಹಿಳೆಯರು..!