ಹುಬ್ಬಳ್ಳಿ: ಲಂಚ ಸ್ವೀಕಾರ ಪ್ರಕರಣದಲ್ಲಿ ಕಸಬಾ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ವಡ್ಡರ ಮೇಲೆ ಇಲಾಖೆ ಶಿಕ್ಷೆ ವಿಧಿಸಿದೆ. ಆಟೋ ಚಾಲಕರೊಬ್ಬರಿಂದ ಲಂಚ ಸ್ವೀಕರಿಸಿದ ಆರೋಪದಡಿ ಇಲಾಖಾ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಹಿಂದಿನ ಪೋಲೀಸ್ ಆಯುಕ್ತ ಕೆ.ಸಂತೋಷ ಬಾಬುರವರು ಎಸ್.ಐ ರವಿ ವಡ್ಡರಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ: 2021 ರ ಮೇ 02 ರಂದು ದುರ್ಗದಬ್ಯೆಲ್ ಹತ್ತಿರ ಮದ್ಯಪಾನ ಮಾಡಿ ಅಟೋ ಚಾಲನೆ ಮಾಡುತ್ತಿದ್ದವನನ್ನು ರವಿ ವಡ್ಡರ ತಡೆದಿದ್ದರು.ಚಾಲಕನ ಮೇಲೆ ಯಾವುದೇ ಪ್ರಕರಣ ದಾಖಲಿಸದೇ 5200 ರೂ ಲಂಚ ಪಡೆದಿದ್ದರು ಎಂಬ ಆರೋಪ ಎದುರಾಗಿತ್ತು.ಈ ಪ್ರಕರಣ ಬಹಿರಂಗವಾದ ಮೇಲೆ ರವಿ ವಡ್ಡರ ಮೇಲೆ ಇಲಾಖೆ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆ ಎಸ್ಐ ರವಿ ವಡ್ಡರ ಲಂಚ ಸ್ವೀಕಾರ ಮಾಡಿದ್ದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವೇತನ ಬಡ್ತಿಯನ್ನು(Increment) ಆರು ತಿಂಗಳ ಮುಂದೂಡಿ ಆದೇಶಿಸಲಾಗಿದೆ. ಇದೇ ಪ್ರಕರಣದಲ್ಲಿ 2021 ರ ಮೇ 10 ರಿಂದ 2021 ರ ಜೂನ್11 ರವರೆಗೆ ಎಸ್ಐ ರವಿ ವಡ್ಡರ ಅವರನ್ನು ಅಮಾನತ್ತಾಗಿದ್ದರು.
Kaveri river: ಕಾಂಗ್ರೆಸ್ ಸರ್ಕಾರ ಕಾವೇರಿ ರಾಜ್ಯದ ಹಿತ ಕಾಯುವಲ್ಲಿ ವಿಫಲ: ಬೊಮ್ಮಾಯಿ ಆಕ್ರೋಶ.!
Book publish : ಭ್ರಷ್ಟಾಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ
Election Result: ರಾಜಕೀಯ ಗೊಂದಲಕ್ಕೆ ಕಾರಣವಾದ ಚುನಾವಣೆ ಫಲಿತಾಂಶ..!