Monday, December 23, 2024

Latest Posts

hubli Police- ಖಾಕಿಗೆ ತಲೆನೋವಾದ ವೈರಲ್ ವಿಡಿಯೋ: ಹೇಯ ಕೃತ್ಯ ಬಚ್ಚಿಟ್ಟರಾ ಪೋಲಿಸರು..?

- Advertisement -

ಹುಬ್ಬಳ್ಳಿ: ಆರಕ್ಷಕರು ಎಂದರೆ ಅನ್ಯಾಯವನ್ನು ಮೆಟ್ಟಿನಿಂತು ಜನರಿಗೆ ನ್ಯಾಯ ಒದಗಿಸುವ ಜನಸೇವಕರು. ಕ್ರೈಮ್ ಗಳಿಗೆ ಕಡಿವಾಣ ಹಾಕಬೇಕಿರುವವರೇ ಆರೋಪಗಳನ್ನು ಸೇಫ್ ಮಾಡಲು ಹೊರಟಿದ್ದಾರಾ ಎಂಬುವಂತ ಅನುಮಾನ ದಟ್ಟವಾಗಿದೆ. ಅಷ್ಟಕ್ಕೂ ಏನಿದು ಖಾಕಿ ಪಡೆಯ ಕಹಾನಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್…

ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸುವಂತೇ ಮಾಡಿತ್ತು. ಈ ಪ್ರಕರಣ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೂ ತಲೆನೋವಾಗಿತ್ತು. ಆದರೆ ಈ ಸ್ಟೋರಿ ಇನಸೈಡ್ ಕಹಾನಿಯೇ ಬೇರೆಯಿದೆ. ಹೌದು.. ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಆರೋಪಿಗಳ ರಕ್ಷಣೆಗೆ ಬೆಂಡಿಗೇರಿ ಪೊಲೀಸರು ಮುಂದಾಗಿದ್ದಾರೆ ಎಂಬುವಂತ ಆರೋಪ ಕೇಳಿ ಬಂದಿದೆ. ರೌಡಿಶೀಟರ್ ಹಿನ್ನೆಲೆಯುಳ್ಳ ಆರೋಪಿಗಳ ರಕ್ಷಣೆಗೆ ಮುಂದಾಗುತ್ತಿದ್ದಾರಾ ಪೊಲೀಸರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಒಂದೆಡೆ ಘಟನೆ ನಡೆದು ಮೂರ್ನಾಲ್ಕು ತಿಂಗಳು ಕಳೆದರೂ ಘಟನೆ ಬಗ್ಗೆ ತುಟಿ ಪಿಟಕ್ ಎನ್ನದ ಪೊಲೀಸರು, ಮಾಧ್ಯಮದಲ್ಲಿ ಸುದ್ಧಿ ಪ್ರಸಾರವಾಗುತ್ತಿದ್ದಂತೆಯೇ ಆರೋಪಗಳನ್ನು ಹಿಡಿದು ತಂದಿದ್ದಾರೆ. ಇದೆಲ್ಲವೂ ನೀನು ಅತ್ತಂಗೆ ಮಾಡು ನಾನು ಸತ್ತಂಗೆ ಮಾಡುತ್ತೇನೆ ಎಂಬುವಂತ ಡ್ರಾಮಾ ಸೃಷ್ಟಿಸಿದ್ದಾರೆಯೇ ಎಂಬ ಅನುಮಾನ ಈ ಪ್ರಕರಣಕ್ಕೆ ಪುಷ್ಟಿ ನೀಡುವಂತಿದೆ.

ಇನ್ನೂ ನಾಲ್ಕು ತಿಂಗಳ ಹಿಂದೆ ಘಟನೆ ನಡೆದ್ರು, ಬೆಂಡಿಗೇರಿ ಪೊಲೀಸರಿಗೆ ವಿಷಯವೇ ಗೊತ್ತಿರಲಿಲ್ಲವೇ..? ಬೆಂಡಿಗೇರಿ ಪೊಲೀಸರಿಗೆ ಬೆತ್ತಲೆ ವಿಡಿಯೋ ಲಭ್ಯವಾದ್ರೂ ಪ್ರಕರಣವನ್ನೇ ಮುಚ್ಚಿ ಹಾಕಿದ್ರಾ..? ನಾಲ್ಕು ತಿಂಗಳ ಹಿಂದೆ ನಡೆದ ಪ್ರಕರಣವನ್ನ ಪೊಲೀಸರು ಏಕೆ ಮುಚ್ಚಿಟ್ಟರು..? ಇದರ ಹಿಂದೆ ಪ್ರಕರಣ ಮುಚ್ಚಿ ಹಾಕುವ ಬಗ್ಗೆ ಷಡ್ಯಂತ್ರ ನಡೆದಿದೆ ಎಂಬ ಮಾತು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಆರೋಪಿಗಳ ಬೆನ್ನಿಗೆ ನಿಂತು ಅಮಾನವೀಯ ಘಟನೆಯನ್ನೇ ಬಚ್ಚಿಟ್ಟ ಪೊಲೀಸರಿಗೆ ಯಾವ ಶಿಕ್ಷೆ ನೀಡಬೇಕು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆರೋಪಿಗಳಿಗೆ ರಕ್ಷಣೆ ನೀಡಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವವರು ಯಾರು..? ಪೊಲೀಸ್ ಆಯುಕ್ತರೇ ಆರೋಪಿಗಳಿಗೆ ಕುಮ್ಮಕ್ಕು ನೀಡಿದ ಪೊಲೀಸ್ರ ಮೇಲೆ ಕ್ರಮ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ ಹುಬ್ಬಳ್ಳಿಯ ಜನರು.

ಒಟ್ಟಿನಲ್ಲಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿಯುತ್ತಿರೋ ಪೊಲೀಸರು,‌ ಯಾರನ್ನು ಮೆಚ್ಚಿಸಲು ಈ ಖಾಕಿ ಕಸರತ್ತು ನಡೆಸಿದೆಯೋ ಗೊತ್ತಿಲ್ಲ. ಈಗಾಗಲೇ ಬೆತ್ತಲೆ ಪ್ರಕರಣದಲ್ಲಿ ಆರು ಜನರನ್ನ ಬಂಧಿಸಿರೋ ಬೆಂಡಿಗೇರಿ ಪೊಲೀಸರು,‌ಆರೂ ಜನ ಆರೋಪಿಗಳನ್ನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳ ರಕ್ಷಣೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಒತ್ತಡ ಕೂಡ ಬಂದಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡ ಯುವಕನ ಬೆತ್ತಲೆ ಪ್ರಕರಣ ಮತ್ತೇ ಯಾವ ತಿರುವು ಪಡೆದುಕೊಳ್ಳಲಿದೆ‌ ಎಂದು ಕಾದುನೋಡಬೇಕಿದೆ

Venugopal : ಧರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆದಿದೆ : ಪೂರ್ಣಿಮಾ

Crist Collage : ಕ್ರೈಸ್ಟ್‍ಕಿಂಗ್: ಸಿಎ, ಸಿಎಸ್ ಮಾಹಿತಿ ಕಾರ್ಯಕ್ರಮ

Karkataka Jathre :ಮರವಂತೆ ಶ್ರೀ ಮಹಾರಾಜ ವರ ದೇವಸ್ಥಾನ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್ 16ಕ್ಕೆ

- Advertisement -

Latest Posts

Don't Miss