Hubli News: ಹುಬ್ಬಳ್ಳಿ: ಜೂಜು ಅಡ್ಡೆ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 10 ಜನರನ್ನು ಬಂಧಿಸಲಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿಯ ಹೊರವಲಯದಲ್ಲಿ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಸಿಪಿಐ ಮುರುಗೇಶ್ ಚನ್ನಣ್ಣವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಈ ವೇಳೆ ಬಂಧಿತರಿಂದ 5670 ನಗದು ಜಪ್ತಿ ಮಾಡಿ ಹತ್ತು ಜನರನ್ನು ಬಂಧನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಮುರುಗೇಶ್ ಚೆನ್ನಣ್ಣವರ್, ಪಿಎಸ್ಐ ಬೆಳಗಾವ್ಕರ್ , ಸಿಬ್ಬಂದಿಗಳಾದ ಹೊನ್ನಪ್ಪ,ಕಾಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.



