ಹುಬ್ಬಳ್ಳಿ: ಸ್ಕೂಟರ್ ಬ್ಯಾಗ್ ನಲ್ಲಿ ಇದ್ದ ಹಣವನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಉಪನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು ಬಂದಿತನಿಂದ 7 ಲಕ್ಷ 97,000 ನಗದು ಜಪ್ತಿ ಮಾಡಿದ್ದಾರೆ.
ಸುನಿಲ್ ಜಾಡ್ ಎಂಬಾತ ಅ. 26ರಂದು ಹಳೆಯ ಬಸ್ ನಿಲ್ದಾಣದ ಬಳಿ ಸ್ಕೂಟರ್ ಬ್ಯಾಗನಲ್ಲಿ ಎಂಟು ಲಕ್ಷ ರೂಪಾಯಿ ಇಟ್ಟಿದ್ದ ನಗದು ಕಳ್ಳತನ ವಾಗಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರು ಇನ್ಸ್ಪೆಕ್ಟರ್ ಎಂ ಎಸ್ ಹೂಗಾರ್ ಅವರ ನೇತೃತ್ವದ ತಂಡ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮಲ್ಲಿಕಾರ್ಜುನ್ ಹೊಸೂರ್, ಸಿಬ್ಬಂದಿಗಳಾದ ಪ್ರಕಾಶ್ ಕಲ್ಗುಡಿ, ಗೂಳೇಶ್ ಎಸ್, ಯಳವತ್ತಿ ಮಂಜುನಾಥ, ಹಾಲವರ್, ರೇಣಪ್ಪ ಸಿಕ್ಕಲಿಗೇರ, ಜ್ಞಾನೇಶ್, ಮಾಂಗ , ತರುಣ್ ಗಡ್ಡದವರ ಆರೋಡ ಕರೆನ್ನವರ್, ಭಾಗಿಯಾಗಿದ್ದರು. ಇನ್ನು ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!