Hubli News: ಕ್ಷುಲ್ಲಕ ಕಾರಣಕ್ಕೆ ಯುವಕನ್ನು ಬೆತ್ತಲೆಗೊಳಿಸಿ ಪುಂಡರು ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮೊಬೈಲ್ ನಲ್ಲಿ ಸೆರೆಯಾದ ದೃಶ್ಯವನ್ನು ವೈರಲ್ ಮಾಡಿ ಯುವಕರು ಪುಂಡಾಟಿಕೆ ಮೆರೆದಿದ್ದಾರೆ. ಸೆಟ್ಲಮೆಂಟ್ ಏರಿಯಾದ ಬಡ್ಡಿಂಗ್ ರೌಡಿಗಳಿಂದ ನಡೆದಿದೆ ಕೃತ್ಯ ನಡೆದಿದೆ ಎನ್ನಲಾಗಿದೆ.
ಹೊಸೂರಿನ ಸಂದೀಪ ಸೊಳಂಕೆ ಎಂಬ ಯುವಕನ ಮೇಲೆ ಅಮಾನವೀಯ ಹಲ್ಲೆ ಮಾಡಲಾಗಿದೆ. ಸೆರೆಯಾದ ಹಲ್ಲೆಯ ದೃಶ್ಯದಲ್ಲಿ ಕೆಲವರ ಮುಖ ಪರಿಚಯ ಕೂಡಾ ಕಂಮಡು ಹಿಡಿಯಲಾಗಿದೆ. ಸೆಟ್ಲ್‌ಮೆಂಟ್ ಏರಿಯಾದ ಗಂಗಾಧರ ನಗರದ ಪ್ರಜ್ವಲ್ ಗಾಯಕವಾಡ, ಗಬ್ಬೂರಿನ ಜಸ್ಟೀನ್ ಮಂಜ್ಯಾ@ ಮಂಜುನಾಥ್ ಅಂಗಡಿ, ಸೆಟ್ಲಮೆಂಟ್ ಏರಿಯಾದ ಮಂಜ್ಯಾ@ ಮಂಜುನಾಥ್ ಎಂಬುವರ ಗುರುತು ಪತ್ತೆಯಾಗಿದೆ. ದುಷ್ಕರ್ಮಿಗಳು ಮರಾಠಿ ಹಾಗೂ ಕನ್ನಡದಲ್ಲಿ ಮಾತನಾಡಿದ್ದು ಕಂಡು ಬಂದಿದೆ.
ಇಸ್ಟಾಗ್ರಾಂ ಇನ್ ಬಾಕ್ಸ್ ನಲ್ಲಿ ಬೈಯ್ದು ಮೆಸೆಜ್ ಹಾಕಿದ್ದ ಅನ್ನೊ ಕಾರಣಕ್ಕೆ ಹಲ್ಲೆ ಹಲ್ಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಯುವಕ ಅಳುತ್ತಾ ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಕಿರಾತಕರು ಕ್ಯಾರೇ ಅನ್ನದೆ ಪುಂಡಾಟಿಕೆ ಮೆರೆದಿದ್ದಾರೆ. ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದಲ್ಲೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ರೌಡಿಗಳ ಅಟ್ಟಹಾಸಕ್ಕೆ ಹುಬ್ಬಳ್ಳಿ ಜನ ಹೈರಾಣಾಗಿದ್ದಾರೆ. ಸಣ್ಣಪುಟ್ಟ ಮಾತುಗಳಿಗೂ ಚಾಕು ಚೈನು ಮಚ್ಚು ಲಾಂಗು ಎತ್ತುತ್ತಿದ್ದಾರೆ ಯುವಕರು.
Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!