ಧಾರವಾಡ: ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಹಾನಿಯಾಗಿದೆ ಎಂಬವುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತಿದ್ದಾರೆ. ಸಾಕಷ್ಟು ಪ್ರದೇಶಗಳಲ್ಲಿ ಹಾನಿಯಾಗಿದೆ ಧಾರವಾಡ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಬಿದ್ದಿವೆ, ಇನ್ನು ಸರ್ವೇ ಕಾರ್ಯ ಅಧಿಕಾರಿಗಳಿಂದ ನಡೆದಿದೆ.ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ತಿಳಿಸಿದರು.
ಎಲ್ಲಲ್ಲಿ ಎಷ್ಟು ಮನೆಗಳು ಬಿದ್ದಿವೆ ಎಂಬ ಕುರಿತು ವರದಿ ನೀಡಲು ಸೂಚಿಸಲಾಗಿದೆ .ಅಂದಾಜಿನ ಪ್ರಕಾರ ಇಂದಿನವರೆಗೆ 100 ಮನೆಗಳು ಬಿದ್ದ ಕುರಿತು ಮಾಹಿತಿ ಇದೆ. ಇನ್ನು ಕೃಷಿ ಪ್ರದೇಶ ಎಷ್ಟು ಹಾಳಾಗಿದೆ ಅಂತಾ ನಿಖರವಾಗಿ ಗೊತಿಲ್ಲ. ಮೊದಲು ಬಿತ್ತನೆ ಮಾಡಿದವರ ಬೆಳೆ ಹೆಚ್ಚು ಹಾನಿಯಾಗಿದೆ ಈ ಕುರಿತು ವರದಿ ನೀಡಲು ಸಹ ಹೇಳಿದ್ದೇನೆ.
ಗ್ರಾಮ ಲೆಕ್ಕಾಧಿಕಾರಿಗಳು, ತಹಸ್ದೀಲಾರ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವರದಿ ನೀಡಲಿದ್ದಾರೆ.ಇನ್ನು ಕೆಲವು ದಿನಗಳ ಕಾಲ ಮಳೆ ಬರುವ ಕಾರಣ ಇದೇ ಪರೀಸ್ಥಿತಿ ಮುಂದುವರಿಯಲಿದೆ.
National Highway : ಧಾರಾಕಾರ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ..!
Chramudi Ghat: ಚಾರ್ಮುಡಿ ಘಾಟ್ ನಲ್ಲಿ ಗುಡ್ಡ ಕುಸಿತ ವಾಹನ ಸಂಚಾರಕ್ಕೆ ಅಡಚಣೆ
Manjunath : ಕೆಸಿ ವ್ಯಾಲಿ ಯೋಜನೆ ಬಗ್ಗೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಜೆಡಿಎಸ್ ಶಾಸಕ