Thursday, December 4, 2025

Latest Posts

LPG ದರದಲ್ಲೂ ಭಾರಿ ಹೆಚ್ಚಳ ಸಾಧ್ಯತೆ..!

- Advertisement -

www.karnatakatv.net ದಿನದಿಂದ ದಿನಕ್ಕೆ ಏರುತ್ತಲಿರುವ ಇಂಧನ ಬೆಲೆ ಜೊತೆಗೆ ಜನರಲ್ಲಿ ಮತ್ತೆ ಆತಂಕರಾರಿ ಸಂಗತಿಯೋoದು ಕಾದಿದೆ. ಸದ್ಯದಲ್ಲೇ ಎಲ್ ಪಿ ಜಿ ದರವು ಕೂಡಾ ಏರಿಕೆಯಾಗುವುದು ಎಂದು ಪಿಟಿಐ ವರದಿ ಮಾಡಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಡುವೆ ಎಲ್ ಪಿಜಿ ದರವು ಏರಿಕೆಯಾಗಲಿದೆ. ಅಂತರರಾಷ್ಟ್ರೀಯ ದರ ಏರಿಕೆಯ ಪರಿಣಾಮ ಪ್ರತೀ ಸಿಲಿಂಡರ್ ಮೇಲಿನ ನಷ್ಟ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ, ದರ ಹೆಚ್ಚಳವು ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ. ಮತ್ತೆ ಎಲ್‌ಪಿಜಿ ದರ ಹೆಚ್ಚಳವಾದರೆ ಅದು ಈ ವರ್ಷದ ಐದನೇ ಹೆಚ್ಚಳವಾಗಲಿದೆ. ಅಕ್ಟೋಬರ್ 6 ರಂದು ಎಲ್‌ಪಿಜಿ ದರವು ಪ್ರತಿ ಸಿಲಿಂಡರ್‌ಗೆ 15 ರಷ್ಟು ಹೆಚ್ಚಳವಾಗಿತ್ತು. ಇದೂ ಸೇರಿ ಜುಲೈನಿಂದ 14.2 ಕೆಜಿ ಸಿಲಿಂಡರ್‌ಗೆ 90 ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಇಂಧನ ಬೆಲೆಗಳು ಬಹು ವರ್ಷದ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಎಲ್‌ಪಿಜಿ ಮಾರಾಟದಲ್ಲಿನ ನಷ್ಟವು ಪ್ರತಿ ಸಿಲಿಂಡರ್‌ಗೆ 100 ಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದರು. ‘ಎಲ್‌ಪಿಜಿ ಇನ್ನೂ ನಿಯಂತ್ರಿತ ಸರಕಾಗಿದೆ. ಆದ್ದರಿಂದ, ತಾಂತ್ರಿಕವಾಗಿ, ಸರ್ಕಾರವು ಚಿಲ್ಲರೆ ಮಾರಾಟದ ಬೆಲೆಯನ್ನು ನಿಯಂತ್ರಿಸಬಹುದು. ಆದರೆ, ಅವರು ಹಾಗೆ ಮಾಡಿದಾಗ ತೈಲ ಕಂಪನಿಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಕಳೆದ ವರ್ಷ ಎಲ್‌ಪಿಜಿ ಮೇಲಿನ ಸಬ್ಸಿಡಿಗಳನ್ನುತೆಗೆದುಹಾಕಿತ್ತು. ಆದರೆ, ಪೆಟ್ರೋಲ್ ಮತ್ತು ಡೀಸೆಲ್‌ನಂತೆ, ಅದರ ಬೆಲೆ ನಿಯಂತ್ರಣವನ್ನು ತೆಗೆದುಹಾಕಲಾಗಿದೆ, ಸರ್ಕಾರವು ಎಲ್ ಪಿ ಜೆ ದರಗಳ ನಿಯಂತ್ರಣವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಒಂದು ಪಕ್ಷ, ಸರ್ಕಾರವು ಸಬ್ಸಿಡಿಯನ್ನು ಭರಿಸಲು ಸಿದ್ಧವಿಲ್ಲದಿದ್ದರೆ, ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಅಡುಗೆ ಅನಿಲ ಸಿಲಿಂಡರ್ ಬೆಲೆಯು 899.50 ಮತ್ತು ಕೋಲ್ಕತ್ತಾದಲ್ಲಿ 926 ಆಗಿದೆ. ಬೆಂಗಳೂರಿನಲ್ಲಿ 902.50 ಆಗಿದೆ.

- Advertisement -

Latest Posts

Don't Miss