www.karnatakatv.net : ರಾಯಚೂರು: ನೂರಾರು ಎಕರೆ ಬತ್ತ ಬೆಳೆದು ಲಾಭ ಕಾಣದ ರೈತ ಇಂದು ಹೊಸದೇನೋ ಬೆಳೆಯ ಬೇಕು ಅಂತ ಕನಸುಕಟ್ಟಿದ್ರು. ಇದೀಗ ಈ ರೈತ ಕಡಿಮೇ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯೋ ನಿರೀಕ್ಷೆಯಲ್ಲಿದ್ದಾರೆ .
ಎಲ್ಲಿನೋಡಿದರೂ ಹಳದಿ , ಕೆಸರಿ ಬಣ್ಣದಿಂದ ಕಂಗೊಳಿಸುತ್ತಿರೋ ಜಮೀನು. ಇದು ರಾಯಚೂರು ತಾಲ್ಲೂಕಿನಲ್ಲಿ ಕಂಡುಬಂದ ದೃಶ್ಯ. ಧರ್ಮರಾಜು ಅನ್ನೋ ಆಂಧ್ರ ಮೂಲದ ರೈತ ಸದ್ಯ ಈ ಚಂಡುಹೂ ಬೆಳೆಯುತ್ತಾ ಲಾಭ ಗಳಿಸ್ತಿರೋ ರೈತ.
ಇನ್ನು ರೈತ ಧರ್ಮರಾಜು, ಈ ಹಿಂದೆ ಜಮೀನನ್ನು ಬಾಡಿಗೆ ಪಡೆದು 80 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ರು. ಆದ್ರೆ ಭತ್ತ ಕೂಡ ಅಷ್ಟೇನೂ ಲಾಭ ತಂದುಕೊಡಲಿಲ್ಲ. ಹೀಗಾಗಿ ಸದ್ಯ ಚೆಂಡು ಹೂವಿನ ಬೇಸಾಯ ಮಾಡ್ತಿದ್ದು ಅತ್ಯಧಿಕ ಲಾಭ ಗಳಿಸ್ತಿದ್ದಾರೆ.
ಇನ್ನೂ ಈ ಚೆಂಡೂ ಹೂವಿನ ಬೇಸಾಯಕ್ಕೆ ರೈತ ಧರ್ಮರಾಜು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನು ರಸ್ತೆ ಬದಿಯ ಜಮೀನಿನಲ್ಲೇ ಈ ಚೆಂಡು ಹೂ ಬೆಳೆಯುತ್ತಿರೋದ್ರಿಂದ ಈ ರೈತ ತಾನು ಬೆಳೆದಿರೋ ಹೂಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗೋ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ಗ್ರಾಹಕರು ವರ್ತಕರೆಲ್ಲರೂ ಇಲ್ಲಿಗೇ ಬಂದು ನೇರವಾಗಿ ಹೂಗಳನ್ನು ಖರೀದಿ ಮಾಡ್ತಿದ್ದಾರೆ.
ಇನ್ನೇನು ದಸರಾ ದೀಪಾವಳಿಯಂತಹ ದೊಡ್ಡ ಹಬ್ಬಗಳು ಬರ್ತಿವೆ. ಹೀಗಾಗಿ ರೈತ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತೆಗೆಯೋ ಚೆಂಡುಹೂ ಕೃಷಿಗೆ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಅನಿಲ್‌ಕುಮಾರ್, ಕರ್ನಾಟಕ ಟಿವಿ -ರಾಯಚೂರು