LPG ಬಳಕೆದಾರರಿಗೆ ದೀಪಾವಳಿ ಹಬ್ಬಕ್ಕೂ ಮುನ್ನ ಗುಡ್ ನ್ಯೂಸ್ ಸಿಗಬಹುದಾದ ಸಾಧ್ಯತೆ ಮೂಡಿದೆ. ಅಡುಗೆ ಅನಿಲದ ಬೆಲೆಯಲ್ಲಿ ಇಳಿಕೆ ಸಂಭವಿಸಬಹುದು ಎಂಬ ಪಾಸಿಟಿವ್ ಸಿಗ್ನಲ್ ಇದೀಗ ಬಂದಿರುವುದು ದೇಶದ ಲಕ್ಷಾಂತರ ಗ್ರಾಹಕರಿಗೆ ನೆಮ್ಮದಿ ತಂದಿದೆ. ನಗರ ಪ್ರದೇಶಗಳಷ್ಟೇ ಅಲ್ಲದೆ, ಇಂದಿನ ತಂತ್ರಜ್ಞಾನದ ಸುಧಾರಣೆಯಿಂದ ಹಳ್ಳಿಗಳಿಗೆ ಸಹ LPG ಸಿಲಿಂಡರ್ ತಲುಪುತ್ತಿದೆ. ಈ ನಡುವೆ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ಶುಭ ಸೂಚನೆ ಸಿಕ್ಕಿದೆ.
ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಅಮೆರಿಕಾ-ಚೀನಾ ವ್ಯಾಪಾರ ಯುದ್ಧವು ಜಾಗತಿಕ LPG ಪೂರೈಕೆ ಸರಪಳಿಗೆ ಪರಿಣಾಮ ಬೀರುತ್ತಿರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ LPG ಆಮದು ವ್ಯವಸ್ಥೆಯಲ್ಲಿ ಹೊಸ ಮಾರ್ಗಗಳನ್ನು ಹುಡುಕುತ್ತಿದೆ.
ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮಿಲಿತವಾಗಿ 2026 ರೊಳಗಾಗಿ ಅಮೆರಿಕದಿಂದ ಮೂರು ದೊಡ್ಡ LPG ವಾಹಕಗಳನ್ನ ಖರೀದಿಸುವ ಟೆಂಡರ್ ನೀಡಿವೆ. ಈ ಮೂರು ಕಂಪನಿಗಳು 331 ಮಿಲಿಯನ್ ಗಿಂತಲೂ ಹೆಚ್ಚು ದೇಶೀಯ ಗ್ರಾಹಕರಿಗೆ LPG ಪೂರೈಸುವ ಜವಾಬ್ದಾರಿಯನ್ನು ಹೊಂದಿವೆ. ಅದರಲ್ಲಿ 60% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ.
ಸೌದಿ ಅರೇಬಿಯಾದಂತಹ ದೇಶಗಳು ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ತಮ್ಮ ಒಪ್ಪಂದ ಕಾಪಾಡಿಕೊಳ್ಳಲು ಎಲ್‌ಪಿಜಿ ಬೆಲೆಗಳನ್ನು ಕಡಿಮೆ ಮಾಡುತ್ತಿದ್ದರೆ, ಇದೀಗ ಅಮೆರಿಕವೂ ಪೂರೈಕೆದಾರರ ಪಟ್ಟಿಗೆ ಸೇರುವ ಮೂಲಕ ಸ್ಪರ್ಧೆ ಹೆಚ್ಚಳವಾಗಲಿದೆ. ತಜ್ಞರ ಅಭಿಪ್ರಾಯ ಪ್ರಕಾರ, ಎಲ್‌ಪಿಜಿ ಪೂರೈಕೆ ಸಾಕಷ್ಟು ಇದ್ದರೆ, ಬೆಲೆಗಳಲ್ಲಿ ಸ್ಥಿರತೆ ಬರಬಹುದು. ದೀರ್ಘಾವಧಿಯ ಪೂರೈಕೆ ಒಪ್ಪಂದಗಳಿದ್ದರೆ, ಆಮದು ನಿರಂತರವಾಗಿದ್ದು, ಬೆಲೆ ಇಳಿಕೆಗೂ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆಗಳಿಂದ, ದೀಪಾವಳಿ ಹಬ್ಬಕ್ಕೂ ಮುನ್ನ ಅಥವಾ ಮುಂದಿನ ತಿಂಗಳುಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಕುಸಿತ ಸಂಭವಿಸಬಹುದು ಎಂಬ ನಿರೀಕ್ಷೆ ಗ್ರಾಹಕರಲ್ಲಿ ಮೂಡಿದೆ. ಆದರೂ, ಕೇಂದ್ರ ಸರ್ಕಾರ ಅಥವಾ ತೈಲ ಸಚಿವಾಲಯದಿಂದ ಅಧಿಕೃತ ಘೋಷಣೆ ಹೊರಬರಬೇಕಿದೆ.
ವರದಿ : ಲಾವಣ್ಯ ಅನಿಗೋಳ