ಹುಣಸೂರು:- ಬನ್ನಿಕುಪ್ಪೆ ಗ್ರಾಮದ ಗ್ರಾ.ಪಂ.ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಮುಖಂಡ ದಿನೇಶ ಎಂಬ ಈ ವ್ಯಕ್ತಿಯು ತಾಲೂಕಿನಾದ್ಯಂತ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಸೇರಿದಂತೆ ಸರ್ಕಾರದ ಯೋಜನೆಗಳ ಅಜಿ೯ ನಮೂನೆಯನ್ನು ನಕಲು ಮಾಡಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಅಮಾಯಕ ಹಾಗೂ ಮುಗ್ದ ಜನರಿಗೆ ಹಣಕ್ಕೆ ಮಾರಾಟ ಮಾಡಿ ಮೋಸ ಮಾಡಿ ವಂಚನೆ ಮಾಡುತ್ತಿರುವ ಬಗ್ಗೆ ಹುಣಸೂರಿನ ಹಲವಾರು ಮಹಿಳೆಯರು ನೀಡಿದ ದೂರಿನ
ಹುಣಸೂರು ತಾಲೂಕಿನ ಉಪ ವಿಭಾಗಧಿಕಾರಿಗಳು ಮತ್ತು ತಹಸಿಲ್ದಾರ್ ರವರು ಈತನನ್ನು ವಿಚಾರಣೆ ಮಾಡಿದ ವೇಳೆ ಈತನ ಬಳಿ ಸಹಿ ಮಾಡಿದ ನಕಲಿ ಅರ್ಜಿಗಳು ಪತ್ತೆಯಾಗಿದ್ದು ,
ಅರ್ಜಿಗಳನ್ನು ವಶಕ್ಕೆ ಪಡೆದು ಕಾನೂನು ರೀತಿ ಕ್ರಮಕೈಗೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಸರ್ಕಾರದಿಂದ ಉಚಿತವಾಗಿ ನೀಡುವ ಅರ್ಜಿಗೆ ಯಾವುದೇ ಶುಲ್ಕ ನೀಡಬಾರದು ಮತ್ತು ಅರ್ಜಿಗಳನ್ನು ಅಕ್ರಮವಾಗಿ ಮಾರಾಟ ಮಾಡಬಾರದೆಂದು ಎಚ್ಚರಿಕೆ ನೀಡಿರುತ್ತಾರೆ.*
ಆದ್ದರಿಂದ *ಹುಣಸೂರು ತಾಲೂಕಿನ ಸಾರ್ವಜನಿಕರು ಹಾಗೂ ಮಹಿಳೆಯರು ಇಂತಹ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳಬಾರದು. ಇಂತಹ ನಕಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ತಾಲೂಕು ಆಡಳಿತ ಮತ್ತಷ್ಟು ಬಿಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹುಣಸೂರು ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್