Thursday, November 13, 2025

Latest Posts

ಅನಾಮಿಕನ ಸೂಟ್‌ಕೇಸ್‌ನಲ್ಲಿ ನೂರಾರು KG ಚಿನ್ನ

- Advertisement -

ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ನೂರಾರು ಕೆ.ಜಿ. ಚಿನ್ನಾಭರಣ ಸಾಗಿಸಲಾಗುತ್ತಿತ್ತು. ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದು ಪೊಲೀಸರು ಜಪ್ತಿ ಮಾಡಿದ್ದಾರೆ. ಮುಂಬೈನಲ್ಲಿ ಬಸ್‌ ಚಾಲಕನ ಕೈಗೆ ಅನಾಮಿಕ ವ್ಯಕ್ತಿಯೊಬ್ಬ ಸೂಟ್‌ಕೇಸ್ ನೀಡಿದ್ದಾನೆ.

ಮಂಗಳೂರು ಬಸ್ ನಿಲ್ದಾಣದಲ್ಲಿ ಸೂಟ್‌ಕೇಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ. ಬಸ್ ಸಂಖ್ಯೆಯನ್ನು ಅವರಿಗೆ ಹೇಳುತ್ತೇನೆ. ನಮ್ಮವರು ಬಂದು ಪಡೆಯುತ್ತಾರೆ. ಇರ್ಫಾನ್ ಎಂಬುವರಿಗೆ ಸೂಟ್‌ಕೇಸ್ ಕೊಡುವಂತೆ ಹೇಳಿದ್ದ.

ಅನುಮಾನ ಬಂದ ಹಿನ್ನೆಲೆ ಭಟ್ಕಳದಲ್ಲಿ ಬಸ್ ಸರ್ಚ್ ಮಾಡಿದಾಗ, ಸೂಟ್‌ಕೇಸ್‌ನಲ್ಲಿ ಸ್ವೀಟ್ ಬಾಕ್ಸ್ ರೀತಿಯ ಬಾಕ್ಸ್‌ ಕಂಡಿದೆ. ಅದನ್ನು ಓಪನ್​ ಮಾಡಿದಾಗ ಹಣ, ಒಡವೆ ಪತ್ತೆ ಆಗಿವೆ. ಸದ್ಯ ಬಸ್ ಚಾಲಕನಿಂದ ನಗದು ಮತ್ತು ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ, ಮಾಲೀಕರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಮುಂಬೈನಿಂದ ಮಂಗಳೂರಿಗೆ ಬಸ್‌ ಬರುತ್ತಿದ್ದು, ಒಂದಲ್ಲ.. ಎರಡಲ್ಲ. ಬರೋಬ್ಬರಿ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಭಟ್ಕಳದಲ್ಲಿ ತಪಾಸಣೆ ಮಾಡಿದಾಗ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ಪತ್ತೆ ಆಗಿದೆ. ಸದ್ಯ, ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss