State News:
ಪತ್ನಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ನಂತರ ಚಾಕುವಿನಿಂದ ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಶಿಕ್ಷಕಿ ಪ್ರೇಮ ಕೊಲೆಯಾದ ಮಹಿಳೆಯಾಗಿದ್ದು, ಶಾಂತೋಜಿರಾವ್ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ದುರುಳ ಪತಿ. ಪತ್ನಿಯ ಮೇಲಿನ ಅನುಮಾನದಿಂದ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಟ್ಟೆಕೆರೆ ಗ್ರಾಮದ ಶಾಂತೋಜಿರಾವ್ ಆಟೋ ಚಾಲಕನಾಗಿದ್ದು ಎರಡು ಮದುವೆಯಾಗಿದ್ದನು. ಮೊದಲ ಪತ್ನಿ ಜೊತೆ ಕೆಲ ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದು, ನಂತರದಲ್ಲಿ ಪತ್ನಿ ಮೇಲೆ ಸದಾ ಅನುಮಾನ ಪಡುತ್ತಿದ್ದನು. ಇದರಿಂದ ಪ್ರತಿನಿತ್ಯ ಕುಟುಂಬದಲ್ಲಿ ದಿನನಿತ್ಯ ಜಗಳ ನಡೆಯುತ್ತಿದ್ದು ಕುಟುಂಬಸ್ಥರು ಅನೇಕ ಬಾರಿ ರಾಜಿ ಸಂಧಾನ ನಡೆಸಿ ಬುದ್ದಿ ಹೇಳಿದರು ತನ್ನ ಚಾಳಿ ಬಿಟ್ಟಿರಲಿಲ್ಲ. ಈತನ ಕಾಟ ತಾಳಲಾರದೆ ಮೊದಲನೇ ಪತ್ನಿ ಗಂಡನನ್ನು ತೊರೆದು ತನ್ನು ಮಕ್ಕಳೊಂದಿಗೆ ಬೇರೆ ಹೋಗಿದ್ದಳು. ನಂತರ ಅಂಗನವಾಡಿ ಶಿಕ್ಷಕಿ ಪ್ರೇಮಳೊಂದಿಗೆ ಎರಡನೇ ವಿವಾಹವಾಗಿದ್ದನು. ಶಾಂತೋಜಿರಾವ್ ತನ್ನ ಚಾಳಿ ಬಿಟ್ಟಿರಲಿಲ್ಲ. ಮೊದಲ ಪತ್ನಿ ಮೇಲೆ ಅನುಮಾನಪಟ್ಟಂತೆ ಎರಡನೇ ಪತ್ನಿ ಪ್ರೇಮ ಮೇಲೂ ಅನುಮಾನ ಪಡುತ್ತಿದ್ದು. ಪ್ರೇಮಾಳಿಗೆ ಯಾವುದೇ ಫೋನ್ ಬಂದರು ಯಾರು ಫೋನ್ ಮಾಡಿದ್ದು ಹೇಳು ಎಂದು ಇಲ್ಲಸಲ್ಲದ ಆರೋಪ ಮಾಡಿ ಕಿರುಕುಳ ಕೊಡುತ್ತಿದ್ದ. ಇದರಿಂದ ಪ್ರೇಮ ರೋಸಿ ಹೋಗಿದ್ದಳು. ಇದೇ ವಿಚಾರಕ್ಕೆ ಕೌಟುಂಬಿಕ ಕಲಹ ತಾರಕಕ್ಕೇರಿ ಶಾಂತೋಜಿರಾವ್ ಮನೆ ಬಿಟ್ಟು ಹೋಗಿದ್ದನು. ಎರಡು ವರ್ಷಗಳ ನಂತರ ಕಳೆದ ತಿಂಗಳು ಮಹಾಲಯ ಅಮಾವಾಸ್ಯೆ ದಿನದಂದು ಮನೆಗೆ ವಾಪಾಸ್ ಬಂದಿದ್ದನು. ಎಲ್ಲರೂ ಚೆನ್ನಾಗಿರೋಣ, ಒಟ್ಟಿಗೆ ಬಾಳೋಣ ಎಂದು ಮತ್ತೆ ಸಂಸಾರ ಶುರು ಮಾಡಿದ್ದ.
ಪತಿ ವಾಪಾಸ್ ಬಂದಿದ್ದಕ್ಕೆ ಪ್ರೇಮ ಖುಷಿಯಾಗಿದ್ದರು. ಆದರೆ ಶಾಂತೋಜಿರಾವ್ ಆಟೋ ಓಡಿಸುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದ. ಅಲ್ಲದೇ ಪುನಃ ಪತ್ನಿ ಅನುಮಾನ ಪಡಲು ಶುರು ಮಾಡಿದ್ದ. ನಿನ್ನೆ ಪ್ರೇಮ ಬಿಕ್ಕೊಡಿನಲ್ಲಿ ಮೀಟಿಂಗ್ ಮುಗಿಸಿ ಮನೆಗೆ ಬಂದು ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಪ್ರೇಮ ಮಂಚದ ಮೇಲೆ ಮಲಗಿದ್ದ ವೇಳೆ ಮಚ್ಚಿನಿಂದ ಮನಸ್ಸೊಯಿಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಮಕ್ಕಳು ನೆರೆಹೊರೆಯವರಿಗೆ ತಿಳಿಸಿದ್ದು ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಆರೋಪಿ ಶಾಂತೋಜಿರಾವ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ. ಸುಖಾಸುಮ್ಮನೆ ಪತ್ನಿಯರ ಮೇಲಿನ ಅನುಮಾಗೊಂಡು ಓರ್ವ ಪತ್ನಿ ಮನೆಬಿಟ್ಟು ಹೋಗಿದ್ದರೆ, ಎರಡನೇ ಪತ್ನಿ ಮಸಣ ಸೇರಿದ್ದಾಳೆ.
“ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ”: ನಳಿನ್‍ಕುಮಾರ್ ಕಟೀಲ್




