Friday, April 18, 2025

Latest Posts

ಹೈದರಾಬಾದ್ ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -

ಹೈದರಾಬಾದ್: ಪಾರ್ಟಿಗಾಗಿ ಪಬ್ ಗೆ ಹೋಗಿದ್ದ ಹದಿಹರೆಯದ ಬಾಲಕಿಯ ಮೇಲೆ ಮರ್ಸಿಡಿಸ್ ಕಾರಿನಲ್ಲಿ ಶಾಲಾ ಮಕ್ಕಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ಶನಿವಾರ ನಡೆದಿದೆ.

ಆರೋಪಿಗಳು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಾಗಿದ್ದು, “ರಾಜಕೀಯವಾಗಿ ಪ್ರಭಾವಿ” ಕುಟುಂಬಗಳಿಗೆ ಸೇರಿದವರು ಎಂದು ಆರೋಪಿಸಲಾಗಿದೆ. ಶಾಸಕರ ಮಗ ಈ ಗುಂಪಿನ ಭಾಗವಾಗಿದ್ದಾನೆ ಎಂದು ನಂಬಲಾಗಿದೆ, ಆದರೆ ಪೊಲೀಸರು ಅವರು ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಾರೆ.

ಶನಿವಾರ ಸಂಜೆ, 17 ವರ್ಷದ ಬಾಲಕಿ ತನ್ನ ಸ್ನೇಹಿತನೊಂದಿಗೆ ಜ್ಯುಬಿಲಿ ಹಿನ್ಸ್ ಪ್ರದೇಶದಲ್ಲಿನ ಪಬ್ ಗೆ ಹೋಗಿದ್ದಳು, ಅವಳು ಬೇಗನೆ ಹೊರಟುಹೋದಳು. ಈ ವೇಳೆ ಹಿಂಬಾಲಿಸಿ ಬಂದಂತ ಯುವಕರು  ಅವಳನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿ, ಮರ್ಸಿಡಿಸ್ ಬೆಂಚ್ ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ.

ಅಲ್ಲಿಂದ ಆ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಯುವತಿ ಪೊಲೀಸರಿಗೆ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ಈ ದೂರು ಆಧರಿಸಿ ಗ್ಯಾಂಗ್ ರೇಪ್ ನಡೆಸಿದಂತ ಯುವಕರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರನ ಹೆಸರು ಕೂಡ ಕೇಳಿ ಬಂದಿದೆ.

- Advertisement -

Latest Posts

Don't Miss