ನಾನು ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಬುದ್ದಿವಂತ ಅನ್ನುವ ಭ್ರಮೆಯಲ್ಲಿ ಇಲ್ಲ. ಜನರು ಬದಕುವ ಸಣ್ಣ ಕೆಲಸ ಮಾಡುತ್ತಿದ್ದೇನೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಗಬೇಕು. ಸಮಸಮಾಜ ನಿರ್ಮಾಣ ಆಗಬೇಕು. ಕೆಲವರು ಮಾತ್ರ ಶ್ರೀಮಂತ ಆದ್ರೆ ನಾಡು ಉದ್ಧಾರ ಆಗೋದಿಲ್ಲ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೂರು ಇಲ್ಲದವರಿಗೆ ಸೂರು, ಹಸಿದವರಿಗೆ ಅನ್ನ ನೀಡುವ ಕೆಲಸ‌ವನ್ನ ಮಾಡುತ್ತಿದ್ದೇನೆ. ನನ್ನ ಕೆಲಸ ಆಧರಿಸಿ ‌ನಾವು ಮತ ಕೇಳುತ್ತೇವೆ. ಬೇರೆಯವರನ್ನು ತೆಗಳಿ ಮತ ಪಡೆಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ನನ್ನ ಪುಣ್ಯ, ಎಲ್ಲರ ಹಾರೈಕೆಯಿಂದ ಆಡಳಿತ ನಡೆಸುತ್ತಿದ್ದೇನೆ. ಸಮೃದ್ಧ ನಾಡು ಕಟ್ಟಲು ಭಗವಂತ ನನಗೆ ಆಶೀರ್ವಾದ ಮಾಡಿದ್ದಾನೆ. ಸಣ್ಣ ಸಮುದಾಯಗಳ ಬೆನ್ನಿಗೆ ಕಾಗಿನೆಲೆ ಸ್ವಾಮೀಜಿ ಗಟ್ಟಿಯಾಗಿ ನಿಂತಿದ್ದಾರೆ. ದೊಡ್ಡ ಸಾಹಸಕ್ಕೆ ಸ್ವಾಮೀಜಿ ಕೈ ಹಾಕಿದ್ದಾರೆ. ಸಮಾಜಕ್ಕೆ ಕೊಡುಗೆ ಕೊಡಲು ಸಂಕಲ್ಪ ಮಾಡಿದ್ದಾರೆ. ಬಸವ, ಬುದ್ಧ,ಅಂಬೇಡ್ಕರ್ ಆಶಯ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮಠಗಳಿಗೆ ಸರ್ಕಾರ ಅನುದಾನ ಕೊಟ್ಟಿದ್ದು ದೊಡ್ಡ ಸಾಧನೆಯಲ್ಲ. ಸರ್ಕಾರ ರಸ್ತೆ ಮಾಡುವುದು ಮಾತ್ರ ಅಲ್ಲ. ಎಲ್ಲ ಸಮುದಾಯಗಳು ಅಭಿವೃದ್ಧಿಯಾಗಬೇಕು. ಸರ್ಕಾರ ಶ್ರೀಮಂತ ಆಗಬೇಕಿಲ್ಲ ಜನರು ಏಳಿಗೆಯಾಗಬೇಕು ಎಂದರು.

ನಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ನೋಡಿ ಆಶೀರ್ವಾದ ಮಾಡಿ. ಇಲ್ಲದೆ ಹೊದ್ರೆ ನಮಗೆ ಆಶೀರ್ವಾದ ಮಾಡಬೇಡಿ. ಅಧಿಕಾರ ವಹಿಸಿಕೊಂಡಾಗ ಐದು ಸಾವಿರ ಕೋಟಿ ಕೊರತೆ ಇತ್ತು. ಈಗ ಹದಿನೈದು ಸಾವಿರ ಕೋಟಿ ಹೆಚ್ಚುವರಿಯಾಗಿ ಬಂದಿದೆ. ಇದು ನಮ್ಮ ಸಾಮರ್ಥ್ಯ ಅಲ್ಲವಾ..? ಹೆಚ್ಚುವರಿ ಹಣವನ್ನು ಧರ್ಮದ ಕೆಲಸಕ್ಕೆ ವಿನಿಯೋಗ ಮಾಡುತ್ತಿದ್ದೇವೆ ಎಂದರು.

ರೈತರ ಮಕ್ಕಳಿಗೆ ವಿದ್ಯಾಸಿರಿ ನಿಡುತ್ತಿದ್ದೇವೆ. ಕ್ಷೀರ ಬ್ಯಾಂಕ್ ನಿರ್ಮಾಣ ಮಾಡಿದ್ದೇವೆ. ಸ್ತ್ರೀ ಶಕ್ತಿ ಗುಂಪುಗಳಿಗೆ ಶಕ್ತಿ ತುಂಬಿದ್ದೇವೆ. ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡಿದ್ದೇವೆ. ಆರ್ಥಿಕತೆ ಅಂದ್ರೆ ದುಡ್ಡು ಮಾತ್ರ ಅಲ್ಲ. ಜನರ ದುಡಿಮೆ ಅಂದ್ರೆ ಆರ್ಥಿಕತೆ. ದುಡ್ಡೆ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ. ಈ ಮೂಲಕ ಮಾಠಧೀಶರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

About The Author