Tuesday, April 15, 2025

Latest Posts

ಹೈಕಮಾಂಡ್‌ಗೆ ನಾನು ಆಭಾರಿಯಾಗಿದ್ದೇನೆ; ನವಜೋತ್ ಸಿಂಗ್ ಸಿಧು..!

- Advertisement -

www.karnatakatv.net : ರಾಜಕೀಯ ಜೀವನದಲ್ಲಿ ರಾಜಿಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಹೈಕಮಾಂಡ್ ಯಾವಾಗಲೂ ನನಗೆ ಅನುಕೂಲವನ್ನು ಮಾಡಿಕೊಟ್ಟಿದೆ ಕಾಂಗ್ರೆಸ್ ಹೈಕಮಾಂಡ್‌ಗೆ ನಾನು ಆಭಾರಿಯಾಗಿದ್ದೇನೆ ಆದರೆ ರಾಜಿ ಮಾಡಿಕೊಂಡಿಲ್ಲ, ಈ ದೈತ್ಯಾಕಾರದ ವ್ಯವಸ್ಥೆಯು ನಿಮ್ಮನ್ನು ನುಂಗಿ ಬಿಡುತ್ತದೆ ಎಂದರು. ಭ್ರಷ್ಟಾಚಾರದ ಬೇರನ್ನು ಕತ್ತರಿಸುವುದನ್ನು ಬಿಟ್ಟು, ಮೇಲಿನಿಂದ ಹೊಡೆದೋಡಸುವ ನಾಟಕ ನಡೆಯುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗಳನ್ನು ವಿರೋಧಿಸುವುದರಲ್ಲಿ ನನಗೆ ಖುಷಿ ಇದೆ. ನಾನು ಎಂದಿಗೂ ರಾಜಿ ಮಾಡಿಲ್ಲ ಎಂದಿದ್ದಾರೆ.

ಅವರು ಕೇಜ್ರಿವಾಲ್ 16,000 ಮೊಹಲ್ಲಾ ಕ್ಲಿನಿಕ್ ಹಾಗೂ ಉದ್ಯೋಗಗಳನ್ನು 25 ಲಕ್ಷಕ್ಕೆ ನೀಡುವುದಾಗಿ ಭರವಸೆ ನೀಡಿದರು.
ನಾವು ಇದನ್ನು ಮಾಡಲು ಸಿದ್ಧ ಆದರೆ ನಮಗೆ ಆದಾಯದ ಕೊರತೆ ಇದೆ. ಪಂಜಾಬ್ ನಲ್ಲಿ 1 ಲಕ್ಷ ಹುದ್ದೆಗಳು ಖಾಲಿ ಇವೆ ಆದರೆ ಹಣವಿಲ್ಲದ ಕಾರಣ ಅವುಗಳನ್ನು ಭರ್ತಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.

“ನಾನು ನೀತಿಗಳನ್ನು ನೀಡುತ್ತಿದ್ದೆ. ನಾನು ಮದ್ಯ ನೀತಿ, ಮರಳು ಗಣಿಗಾರಿಕೆ ನೀತಿ ನೀಡಿದ್ದೇನೆ. ಅಕಾಲಿಗಳಿಗೆ ಸಂಬAಧಿಸಿದ ಕೇಬಲ್ ನೆಟ್‌ವರ್ಕ್ ಸರ್ಕಾರಿ ಭೂಮಿಯಲ್ಲಿ ಹೇಗೆ ಇದೆ ಎಂದು ನಾನು ಎತ್ತಿದೆ. ವ್ಯಕ್ತಿಗಳು ಶ್ರೀಮಂತರಾಗುತ್ತಾರೆ ಆದರೆ ರಾಜ್ಯವು ನರಳುತ್ತದೆ. ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿದೆ. ಸಾಲ ತೀರಿಸಲು ನಾವು ಸಾಲ ತೆಗೆದುಕೊಳ್ಳುತ್ತೇವೆ. ಪಿಪಿಎಗಳನ್ನು ರದ್ದುಗೊಳಿಸುವುದು ತಾಂತ್ರಿಕ ಸಮಸ್ಯೆಯಾಗಿರಬಹುದು ಆದರೆ ಕೊನೆಯಲ್ಲಿ ಅದು ಹಣಕಾಸಿನ ಸಮಸ್ಯೆಯಾಗಿದೆ. ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್, ಅಂಬೇಡ್ಕರ್ ಯೋಜನೆ ಪಂಜಾಬ್ ಸರ್ಕಾರವು ಕಳೆದ ವರ್ಷ ಆರಂಭಿಸಿತು ಆದರೆ ಇಂದಿಗೂ ಜಾರಿಗೆ ಬಂದಿಲ್ಲ ಏಕೆಂದರೆ ಹಣವಿಲ್ಲ.

- Advertisement -

Latest Posts

Don't Miss