Thursday, December 12, 2024

Latest Posts

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರನ್ನು ನನ್ನ ಕ್ಷೇತ್ರದ ಒಂದು ಬಡಾವಣೆಗೆ ಇಟ್ಟಿರುವುದು ಹರ್ಷ ತಂದಿದೆ : ಶಾಸಕ ಜಮೀರ್ ಅಹ್ಮದ್ ಖಾನ್

- Advertisement -

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಆಜಾದ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಯೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರು ಇಟ್ಟಿರುವುದು ನನಗೆ ತುಂಬಾ ಹರ್ಷ ತಂದಿದೆ. ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ, ಅವರೊಂದು ಅದ್ಭುತ ಶಕ್ತಿ ಎಂಬುದನ್ನು ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಗೌರವದಿಂದ ಸಾಬೀತಾಗಿದೆ ಎಂದು ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನ ನೂತನ ಬಡಾವಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ನಮ್ಮ ಮತ್ತು ಡಾ.ರಾಜ್ ಕುಮಾರ್ ಅವರ ಕುಟುಂಬದ ನಡುವೆ ಅವಿನಾಭಾವ ಬಾಂಧವ್ಯ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ‌ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರಲ್ಲಿದ್ದ ಸರಳತೆ, ಸಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ. ಅವರು ನಮ್ಮನ್ನು ಅಗಲುವ ಮುನ್ನಾ ದಿನ ನನ್ನ ಮಗನೊಂದಿಗೆ ಫೋನ್ ಕಾಲ್ ನಲ್ಲಿ ನಡೆಸಿದ ಸಂಭಾಷಣೆ ಇಂದಿಗೂ ಕಿವಿಯಲ್ಲಿ ಗುನುಗುವಂತಿದೆ ಎಂದು, ಆಡಿಯೋ ಪ್ಲೇ ಮಾಡಿ, ಪವರ್ ಸ್ಟಾರ್ ಮತ್ತು ತಮ್ಮ ನಡುವಿನ ಸ್ನೇಹವನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಸಿ ರಮೇಶ್‌, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ಸಿದ್ದಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

- Advertisement -

Latest Posts

Don't Miss