Sunday, July 6, 2025

Latest Posts

ನಾನು ಸಿಎಂ ಆಗುತ್ತಿರುವ ಖುಷಿಗಿಂತ ನನ್ನ ಅಣ್ಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಬೇಸರವಾಗಿದೆ: ಅತಿಶಿ

- Advertisement -

Delhi: ದೆಹಲಿಯ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ರಿಲೀಸ್ ಆದ ಬಳಿಕ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅದರಂತೆ, ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಿಸೈನ್ ಮಾಡಿದ್ರೆ, ಮುಂದಿನ ಸಿಎಂ ಆಗುವವರು ಯಾರು ಎಂಬ ಬಗ್ಗೆ ಇಂದು ಸಿಎಂ ನಿವಾಸದಲ್ಲಿ ಚರ್ಚೆ ನಡೆದಿತ್ತು.

ಮನೀಷ್ ಸಿಸೋಡಿಯಾ ಮತ್ತು ಅತಿಶಿ ಹೆಸರನ್ನು ಮುನ್ನಲೆಗೆ ತರಲಾಗಿತ್ತು. ಅರವಿಂದ್ ಕೇಜ್ರಿವಾಾಲ್ ಅತಿಶಿ ಅವರನ್ನು ದೆಹಲಿಯ ಮುಂದಿನ ಸಿಎಂ ಮಾಡುವ ನಿರ್ಧಾರ ಮಾಡಿದ್ದು, ಅರವಿಂದ್ ಕೇಜ್ರಿವಾಲ್ ರಾಜೀನನಾಮೆ ನೀಡಿದ ಕೆಲ ದಿನಗಳಲ್ಲಿ ಅತಿಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನು ಅರವಿಂದ್ ಅತಶಿಯನ್ನು ಸಿಎಂ ಸ್ಥಾನಕ್ಕಾಗಿ ಆರಿಸಲು ಮುಖ್ಯವಾದ ಕಾರಣ ಅಂದ್ರೆ, ಕೇಜ್ರಿವಾಲ್ ಜೈಲು ಸೇರಿದ್ದಾಗ, ರಾಜ್ಯದಲ್ಲಿ ಅತಿಶಿ ಎಲ್ಲ ಜವಾಬ್ದಾರಿ ನಿಭಾಯಿಸಿದ್ದರು. ಹಾಗಾಗಿ ಅತಿಶಿಗೆ ಮುಂದಿನ ಸಿಎಂ ಆಗುವ ಅರ್ಹತೆ ಇದೆ ಎಂದು, ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಸೆಪ್ಟೆಂಬರ್ 13ರಂದು ಜಾಮೀನಿನ ಮೇಲೆ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದು, ಇನನ್ನೆರಡು ದಿನಗಳಲ್ಲಿ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಸಾರ್ವಜನಿಕರು ತೀರ್ಪು ಕೊಡುವವರೆಗೂ ನಾನನು ಸಿಎಂ ಸ್ಥಾನದಲ್ಲಿ ಕೂರುವುದಿಲ್ಲವೆಂದು ಹೇಳಿದ್ದರು. ಇದೀಗ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ.

ಇನ್ನನು ಈ ಜವಾಬ್ದಾರಿ ಸಿಕ್ಕ ಬಳಿಕ ಮಾತನಾಡಿರುವ ಅತಿಶಿ, ಕೇಜ್ರಿವಾಲ್ ಅವರು ನನಗೆ ಈ ಜವಾಬ್ದಾರಿ ನೀಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ದೆಹಲಿಗೆ ಸಿಎಂ ಅಂತ ಇದ್ದರೆ ಅದು ಅರವಿಂದ್ ಕೇಜ್ರಿವಾಲ್ ಒಬ್ಬರೇ. ಸಾಮಾನ್ಯ ಕುಟುಂಬದಿಂದ ಬಂದವರು, ಆಮ್‌ ಆದ್ಮಿ ಪಕ್ಷದಲ್ಲಿ ಸಿಎಂ ಆಗಬಹುದು ಎನ್ನುವುದಕ್ಕೆ ನಾನೇ ಉದಾಹರಣೆ. ನಾನು ಬೇರೆ ಪಕ್ಷದಲ್ಲಿ ಇದ್ದರೆ, ನನಗೆ ಟಿಕೇಟ್ ಕೂಡ ಸಿಗುತ್ತಿರಲಿಲ್ಲ. ಕೇಜ್ರಿವಾಲ್ ಅವರು ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಶಾಸಕಿಯನ್ನಾಗಿ ಮಾಡಿದರು. ಇದೀಗ ಸಿಎಂ ಆಗುವ ಅವಕಾಶ ಕೊಟ್ಟಿದ್ದಾರೆ. ನನಗೆ ಇದಕ್ಕೆ ಹೆಚ್ಚು, ನನ್ನ ಅಣ್ಣ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್‌ಥಾನಕ್ಕೆ ರಾಜೀನಾಮೆ ಕೊಡುತ್ತಿರುವುದು ಬೇಸರವಾಗುತ್ತಿದೆ ಎಂದು ಅತಿಶಿ ಹೇಳಿದ್ದಾರೆ.

- Advertisement -

Latest Posts

Don't Miss