News: ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ವಿರೋಧಿಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ನಾನು ಧರ್ಮಸ್ಥಳದ ವಿರೋಧಿ ಅಲ್ಲ. ನಾನು ಹಿಂದೂ. ಸನಾತನ ಧರ್ಮದ ಪ್ರತಿಪಾದಕನಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಇಂದು ಕೂಡ ಮಾಡುತ್ತಿದ್ದೇನೆ. ಮುಂದೆಯೂ ಸನಾತನ ಧರ್ಮದ ಪ್ರತಿಪಾದನೆ ಮಾಡುತ್ತೇನೆ. ಆದರೆ ಧರ್ಮಸ್ಥಳದ ಆಡಳಿತ ಮಾಡುತ್ತಿರುವುದು ಹಿಂದೂಗಳಲ್ಲ. ಅವರು ಅನ್ಯಧರ್ಮೀಯರು. ಅವರು ಅಲ್ಪ ಸಂಖ್ಯಾತರ. ಅವರ ವಿರುದ್ಧ ನಮ್ಮ ಹೋರಾಟ.
ಸೌಜನ್ಯ ಪರ ಹೋರಾಟ ಇಂದು ನಿನ್ನೆಯದಲ್ಲ. ದೊಡ್ಡ ದೊಡ್ಡ ಮೀಡಿಯಾದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿರಂತರ ಹೋರಾಟ ನಡೆಯುತ್ತ ಬಂದಿದೆ. ಆದರೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ಸ್ಥಳದಲ್ಲಿ ಬರೀ ಸೌಜನ್ಯಳ ಅತ್ಯಾಚಾರ ಕೊನೆ ನಡೆದಿಲ್ಲ. ಅಲ್ಲಿ ಸಾವಿರಾರು ಅತ್ಯಾಚಾರ, ಕೊಲೆಗಳು ನಡೆದಿದೆ. ಅದನ್ನು ಯಾರು ಮಾಡಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಸಬೇಕಿದೆ.
ಮರುತನಿಖೆಗೆ ಆದೇಶ ನೀಡಬೇಕು ಎಂದು ನಾವು ಕೇಳುತ್ತಿದ್ದೇವೆ. ಆ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದೆ. ಅತ್ಯಾಚಾರಿಗಳ ಪರ ಮಾತನಾಡುವವರ ಪ್ರಶ್ನೆಗಳಿಗೆಲ್ಲ ನಾವು ಉತ್ತರ ಕೊಡಲು ಆಗುವುದಿಲ್ಲ. ದೇಶದಲ್ಲಿ ಎಲ್ಲೇ ಅತ್ಯಾಚಾರವಾದ್ರೂ ನಾವು ಹೋರಾಟ ಮಾಡುತ್ತೇವೆ. ಅತ್ಯಾಚಾರಿಗಳ ವಿರುದ್ಧ ನಾವು ಸದಾ ಹೋರಾಟ ಮಾಡುತ್ತೇವೆ. ನಮ್ಮನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.