www.karnatakatv.net: ನಾನು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆಯಲ್ಲ. ಪೂರ್ಣಾವಧಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಅಂತ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಪಕ್ಷದಲ್ಲಿರುವ ಪ್ರತಿಯೊಬ್ಬರಿಗೂ ಒಂದು ಸ್ಪಷ್ಟತೆಯನ್ನು ನೀಡಲು ಈ ಸಭೆ ಕರೆಯಲಾಗಿದೆ. ಪಕ್ಷದ ಪ್ರತಿಯೊಬ್ಬ ಸದಸ್ಯನೂ ಈಗ ಕಾಂಗ್ರೆಸ್ ಪುನರುಜ್ಜೀವನಗೊಳ್ಳಬೇಕು ಅಂತ ಬಯಸಿದ್ದಾರೆ. ಇನ್ನು ಕಾಂಗ್ರೆಸ್ ಮುನ್ನೆಡೆಸುವ ಒಗ್ಗಟ್ಟಿನ ಅಗತ್ಯವಿದೆ. ಪಕ್ಷದ ಹಿತಾಸಕ್ತಿಯನ್ನು ಪ್ರಧಾನವಾಗಿಟ್ಟುಕೊಂಡು ಎಲರೂ ಕಾರ್ಯನಿರ್ವಹಿಸಬೇಕು. ಇನ್ನು ಏನೇ ಹೇಳಬಯಸಿದ್ದರೂ ಅದನ್ನು ನನ್ನ ಬಳಿಯೇ ನೇರವಾಗಿ ಹೇಳಿ. ನನ್ನೊಂದಿಗೆ ಯಾವುದೇ ವಿಚಾರ ಚರ್ಚಿಸೋದಕ್ಕೂ ನಿಮಗೆ ಸ್ವಾತಂತ್ರ‍್ಯವಿದೆ. ಮಾಧ್ಯಮಗಳ ಮೂಲಕ ಅದನ್ನು ನನಗೆ ತಿಳಿಸೋ ಅಗ್ಯವಿಲ್ಲ ಅಂತ ಸೋನಿಯಾ ಗಾಂಧಿ ಜಿ23 ನಾಯಕರಿಗೆ ಕಾರ್ಯಕಾರಿ ಸಭೆಯಲ್ಲಿ ತಿಳಿಸಿದ್ದಾರೆ.