- Advertisement -
www.karnatakatv.net : ಮುಖ್ಯಮಂತ್ರಿ ಬಿಎಸ್ ವೈ ಅವರ ಬದಲಾವಣೆ ಮಾತು ಕೇಳಿ ಬರುತ್ತಿದ್ದಂತೆ ಹೊಸ ಬಾಂಬ್ ಸಿಡಿಸಿರುವ ಆಹಾರ ಸಚಿವ ಉಮೇಶ್ ಕತ್ತಿ ಮುಖ್ಯ ಮಂತ್ರಿ ಸ್ಥಾನಕ್ಕೆ ನೆಕ್ಟ್ಸ್ ನಾನೇ ಎಂದು ತಮ್ಮ ಮಾತನ್ನು ವ್ಯಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಮುಖ್ಯಮಂತ್ರಿಯಾಗಲು ನನಗೆ ಎಲ್ಲಾ ಅರ್ಹತೆಗಳಿವೆ. ನನ್ನ ವಿರುದ್ಧ ಯಾವುದೆ ಕಳಂಕದ ಆರೋಪವಿಲ್ಲ, 8 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಅನುಭವವಿದೆ ಸಿಎಂ ಹುದ್ದೆ ಖಾಲಿಯಾದರೆ ನಂತರ ನಾನೇ ಇದ್ದೇನೆ. ಹೈಕಮಾಂಡ್ ಮನಸ್ಸು ಮಾಡಿದರೆ ಸಿಎಂ ಆಗಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ.
- Advertisement -