ನಮ್ಮ ಸಮಾಜದಲ್ಲಿ ನಾನು ಒಬ್ಬನೇ ಇರೋದು, ನನ್ನ ಬೆನ್ನಿಗೆ ನಿಂತಿರೋದು ಸಿಎಂ ಬೊಮ್ಮಾಯಿ – ಸಚಿವ ಮುನಿರತ್ನ

ಬೆಂಗಳೂರು:ಸಿಎಂ ಬಸವರಾಜ್ ಬೊಮ್ಮಾಯಿ ಅವರದ್ದು ತಾಯಿ ಹೃದಯ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಹಲ‌ ಮಠಾಧೀಶರನ್ನ ಸರ್ಕಾರಗಳು ಗುರುತಿಸಿರಲಿಲ್ಲ. ಈಗ ತಾಯಿ ಹೃದಯದ ಬಸವರಾಜ್ ಬೊಮ್ಮಾಯಿ ಗುರುತಿಸಿದ್ದಾರೆ. ಪ್ರತಿ ಹಂತದಲ್ಲೂ ಸಿಎಂ ನನ್ನ ಕೈ ಹಿಡಿದಿದ್ದಾರೆ. ಇವರು ನಮ್ಮ ನಾಯಕರು ಎಂಬುದಾಗಿ ಸಚಿವ ಮುನಿರತ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಹಾಡಿ ಹೊಗಳಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ನಾನು ಒಬ್ಬನೇ ಇರೋದು. ನನ್ನ ಸಮಾಜವನ್ನೂ ಗುರುತಿಸಿದ್ದಾರೆ. ನನ್ನ ಬೆನ್ನಿಗೆ ನಿಂತಿರೋದು ಬಸವರಾಜ್ ಬೊಮ್ಮಾಯಿ ಆಗಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಸರ್ಕಾರ, ಸಿಎಂ ಮೇಲಿರಲಿ. ನಮ್ಮ ಪಕ್ಷದ ಚಿನ್ಹೆ ಮೇಲಿರಲಿ ಎಂಬುದಾಗಿ ಮಠಾಧೀಶರಲ್ಲಿ ಮನವಿ ಮಾಡಿದರು.

About The Author