Wednesday, September 17, 2025

Latest Posts

ನಾ ನಿನ್ನ ಬಿಡಲಾರೆ.. ಪ್ರಥಮ್‌ ನಿಂಗೈತೆ ಮಾರಿ ಹಬ್ಬ

- Advertisement -

ಎಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಯಶಸ್ವಿನಿ ಮತ್ತು ಬೇಕರಿ ರಘು, ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್​ಗೆ ಆರೋಪಿ ಯಶಸ್ವಿನಿ ಅವರು ಇಂದು ಶರಣಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕ ಮೇಲೆ ಯಶಸ್ವಿನಿ ಅವರು ಪ್ರಥಮ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿ ರಣಚಂಡಿಯಾಗಿದ್ದಾರೆ.

ಯಶಸ್ವಿನಿ ಮತ್ತು ಬೇಕರಿ ರಘು ಇಬ್ಬರೂ ಜಾಮೀನು ಪಡೆಯಲು ತಮ್ಮ ವಕೀಲರ ಮೂಲಕ ಇಂದು ದೊಡ್ಡಬಳ್ಳಾಪುರದ JMFC ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದಕ್ಕೂ ಮುನ್ನ ಮಾತನಾಡಿದ ಯಶಸ್ವಿನಿ, ನಾನೂ ಸಹ ಪ್ರಥಮ್ ಮೇಲೆ ಪ್ರತಿದೂರು ದಾಖಲಿಸುತ್ತೇನೆ. ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇನೆ, ನನ್ನಿಂದ ದರ್ಶನ್ ಅವರಿಗೆ ಏನಾಗಬೇಕು? ಅವರಿಂದ ನನಗೇನಾಗಬೇಕು? ಸುಮ್ಮನೆ ದರ್ಶನ್ ಹೆಸರು ತಂದಿದ್ದಾರಷ್ಟೇ. ಪ್ರಥಮ್​ನನ್ನು ಬಿಡೋ ಮಾತೇ ಇಲ್ಲ, ನಾನಂತೂ ಬಿಡುವ ಮಗಳೇ ಅಲ್ಲ ಎಚ್ಚರಿಕೆ ಕೊಟ್ಟಿದ್ದಾರೆ.

ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಪ್ರಥಮ್, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಯಶಸ್ವಿನಿ ಮತ್ತು ಬೇಕರಿ ರಘು ಮೇಲೆ ಭಾರತೀಯ ನ್ಯಾಯ ಸಂಹಿತೆಯಡಿ 351(2)(3), 352,126(2) 3(5) ಪ್ರಕರಣ ದಾಖಲಿಸಿದ್ದರು.

ಆರೋಪಿಗಳು ಕೋರ್ಟ್‌ಗೆ ಶರಣಾಗುವ ಮಾಹಿತಿ ತಿಳಿದ ಪೊಲೀಸರು, ಬಂಧಿಸುವ ಯತ್ನ ನಡೆಸಿದರು. ಆದರೆ, ಅವರು ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್‌ ಒಳಗೆ ಹೋದರು. ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದ್ದು, ಇಂದು ಅರ್ಜಿ ವಿಚಾರಣೆ ಕೂಡ ನಡೆದಿದೆ. ನಂತರ ದೊಡ್ಡಬಳ್ಳಾಪುರ ಕೋರ್ಟ್ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss