Tuesday, September 23, 2025

Latest Posts

ಕೊನೆಗೂ ವಿದ್ಯುತ್ ಬೆಳಕು ನೋಡ್ಲಿಲ್ಲ! ಯಾರೀ ಸಸ್ಯಶಾಸ್ತ್ರಜ್ಞೆ ಹೇಮಾ ಸಾನೆ!?

- Advertisement -

ಭಾರತದಲ್ಲಿ ವಿದ್ಯುತ್​ ಸಂಪರ್ಕವಿಲ್ಲದ ಹಳ್ಳಿಗಳು ತೀರಾ ವಿರಳ ಎನ್ನಬಹುದು. ಒಂದೇ ಒಂದು ನಿಮಿಷ ವಿದ್ಯುತ್ ವ್ಯತ್ಯಯ ಉಂಟಾದ್ರೂ ಒದ್ದಾಡಿ ಹೋಗ್ತೀವಿ. ಆದರೇ, ಇಲ್ಲೊಬ್ಬ ಅಜ್ಜಮ್ಮ ಹುಟ್ಟಿದಾಗಿನಿಂದ ಇಲ್ಲೀ ತನಕ ವಿದ್ಯುತ್ ಬೆಳಕನ್ನೇ ನೋಡದೇ, ಅದನ್ನ ಬಳಸದೇ ಬರೀ ಪ್ರಕೃತಿಯನ್ನೇ ಪ್ರೀತಿಸಿದ್ರು. ಆದ್ರೀಗ ಅದೇ ಪ್ರಕೃತಿ ಮಡಿಲು ಸೇರಿದ್ದಾರೆ. ಡಾ. ಹೇಮಾ ಸಾನೆ, ಪುಣೆಯ ಪ್ರಸಿದ್ಧ ಸಸ್ಯಶಾಸ್ತ್ರ ಪ್ರಾಧ್ಯಾಪಕಿ, ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಅವರು ತಮ್ಮ ಜೀವನದುದ್ದಕ್ಕೂ ವಿದ್ಯುತ್ ಬಳಸದೆ, ಪ್ರಕೃತಿಯನ್ನು ಅಪ್ಪಿಕೊಂಡು ಇದ್ದವರು. 1962ರಿಂದ 2000 ರವರೆಗೆ ಪುಣೆಯ ಅಬಾಸಾಹೇಬ್ ಗರ್ವಾರೆ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಅಧ್ಯಯನ ಮತ್ತು ಶಿಕ್ಷಣವನ್ನು ನೀಡಿದ ಡಾ. ಸಾನೆ, ತಮ್ಮ ಸಂಶೋಧನೆಗಳನ್ನು ಹಾಗೂ ಸಾಹಿತ್ಯವನ್ನು ಪ್ರಕೃತಿ ಪ್ರೀತಿಯತ್ತ ಹೆಜ್ಜೆಹಾಕಿದವರು.

ಅವರು ತಮ್ಮ ಜೀವನದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರದ ಪ್ರೌಢಶಿಕ್ಷಣ ನೀಡಿದರೂ, ವೈಶಿಷ್ಟ್ಯಪೂರ್ಣವಾಗಿ ವಿದ್ಯುತ್ ಇಲ್ಲದೆ ಬದುಕುವುದಕ್ಕೆ ಆದ್ಯತೆ ನೀಡಿದವರು. ನಾನು ವಿದ್ಯುತ್ ಇಲ್ಲದೆ ಹೇಗೆ ಬದುಕುತ್ತೇನೆ ಎಂದು ಜನ ಕೇಳುತ್ತಾರೆ. ಅದಕ್ಕೆ ನಾನು ಅವರನ್ನು ಪ್ರಶ್ನಿಸುತ್ತೇನೆ, ನೀವು ವಿದ್ಯುತ್ ಜೊತೆಗೆ ಹೇಗೆ ಬದುಕುತ್ತೀರಿ? ಎಂದು ಅವರು ಹೇಳಿದ್ದಾರೆ. ಜೀವನದ ಸಿದ್ಧಾಂತವೇ ಪ್ರೀತಿ ಮತ್ತು ಸರಳತೆ ಎಂಬುದನ್ನು ವಿವರಿಸುತ್ತಿದ್ದರು.

ಅವರು ತಮ್ಮ ಆಸ್ತಿಯನ್ನು ತಮ್ಮ ಸಾಕುಪ್ರಾಣಿಗಳಿಗೆ ಅರ್ಪಿಸಿದ್ದರು ಮತ್ತು ಬೇರೊಬ್ಬರಿಗೆ ಯಾವುದೇ ಸಂದೇಶವನ್ನು ನೀಡಲು ಹೋಗಿಲ್ಲ. ನಾನು ಇಲ್ಲಿರುವುದೇ ಅವುಗಳನ್ನು ನೋಡಿಕೊಳ್ಳಲು, ಎಂದು ಅವರು ಹೇಳಿದಾಗ, ಅವರ ಜೀವನ ದಾರಿಯು ಪ್ರಕೃತಿಗೆ, ಪರಿಸರಕ್ಕೆ ಮತ್ತು ಸರಳವಾದ ಜೀವನಶೈಲಿಗೆ ಸಮರ್ಪಿತವಾಗಿತ್ತು. ತಮ್ಮ ಶಾಂತ ಬದುಕಿನಲ್ಲಿ ಪ್ರಕೃತಿಯನ್ನು ಅಳವಡಿಸಿಕೊಂಡಿದ್ದರು.

ಅವರ ಮನಸ್ಸು ಮತ್ತು ದೃಷ್ಟಿಕೋನವು ಸಮಾಜಕ್ಕೆ ಅನೇಕ ಪಾಠಗಳನ್ನು ನೀಡಿದೆ. ನಾನು ಯಾವುದೇ ಸಂದೇಶವನ್ನು ಕೊಡುವುದಿಲ್ಲ, ಆದರೆ ನಾನು ಬುದ್ಧನ ಉಪದೇಶವನ್ನು ಪ್ರತಿಧ್ವನಿಸುತ್ತೇನೆ – ʼನೀವು ಜೀವನದಲ್ಲಿ ನಿಮ್ಮ ಸ್ವಂತ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಅವರು ತಮ್ಮ ಬದುಕಿನ ಪ್ರತಿಘಾತವನ್ನಾಗಿ ಹೇಳಿದ್ದರುʼ. ಡಾ. ಹೇಮಾ ಸಾನೆ ತಮ್ಮ ಸರಳವಾದ, ಪರಿಪೂರ್ಣ ಬದುಕು ಮೂಲಕ ನಮಗೆ ಪ್ರಕೃತಿಯ ಮಹತ್ವ ಮತ್ತು ಅದರ ಹತ್ತಿರ ಜೀವಿಸಲು ಹೇಗೆ ನಮ್ಮನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ತಲುಪಿಸಿದ್ದರೇನು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss