Political News
ಬೆಂಗಳೂರು(ಫೆ.7): ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕೊಟ್ಟ ಹೇಳಿಕೆ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮಾಜದಲ್ಲಿ ನನ್ನ ಹೇಳಿಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯ ಅರ್ಥ ಕಲ್ಪಿಸುತ್ತಾರೆ. ನಾನು ಜಾತಿಗೆ ಪ್ರಾಧಾನ್ಯತೆ ಕೊಟ್ಟಿಲ್ಲ, ಜಾತಿಯ ಹೆಸರಲ್ಲಿ ರಾಜಕೀಯ ಮಾಡಿಲ್ಲ. ಜಾತಿ ಮೀರಿ ಕೆಲಸ ಮಾಡಿದ್ದೇನೆ ಎಂದರು.
ನಮ್ಮ ಕುಟುಂಬ ಪ್ರತೀ ಸಮಾಜದ ಬಗ್ಗೆ ಗೌರವದಿಂದ ನಡೆದುಕೊಂಡಿದೆ. ಕುಮಾರಸ್ವಾಮಿ ಹೇಳಿಕೆಯಲ್ಲಿ ಬದಲಾವಣೆ ಅಂತ ಕೆಲವರು ಹೇಳಿದ್ದಾರೆ.ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ನನಗೆ ಬ್ರಾಹ್ಮಣ ಸಮಾಜ, ದಲಿತ ಸಮಾಜಕ್ಕೆ ಅವಮಾನ ಮಾಡಿಲ್ಲ. ನಾನು ಹೇಳಿರುವ ಹಿನ್ನೆಲೆ ಅರ್ಥ ಮಾಡಿಕೊಳ್ಳಿ. ಇದು ನನ್ನ ಕಳಕಳಿ. ಜನಾಭಿಪ್ರಾಯ ಬಂದಾಗ ನಾವು ತಲೆ ಬಾಗಲೇಬೇಕು
ನಾನು ತಿಳುವಳಿಕೆ ಇಲ್ಲದ ಮನುಷ್ಯ ಅಲ್ಲ !
ನಾನು ಪ್ರಹ್ಲಾದ್ ಜೋಷಿ ವಿಚಾರದಲ್ಲಿ ನೀಡಿರುವ ಹೇಳಿಕೆ ಸಂಬಂಧ ನೋಡಬೇಕಿದೆ.ಕರ್ನಾಟಕಕ್ಕೂ ಗೋಡ್ಸೆಗೂ ಏನ್ ಸಂಬಂಧ.. ಕರ್ನಾಟಕಕ್ಕೂ ಸಾವರ್ಕರ್ ಗೂ ಏನ್ ಸಂಬಂಧ? ಸಮಾಜವನ್ನು ಒಡೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಮೀಸಲಾತಿ ವಿಚಾರದಲ್ಲಿ ತಲೆಗೆ ಬಿಜೆಪಿ ತುಪ್ಪ ಸವರಿದೆ. ಬಸವರಾಜ ಬೊಮ್ಮಾಯಿ ಕೂರಿಸಿ ಹಿಂಬಾಗಿಲ ಮೂಲಕ ಕೆಲಸ ಮಾಡ್ತಿದ್ದೀರಿ. ನಾನು ವ್ಯಕ್ತಿಗತವಾಗಿ ಟೀಕೆ ಮಾಡಿದ್ದೇನೆ. ಜಾತಿ ವಿಚಾರದಲ್ಲಿ ಟೀಕೆ ಮಾಡಿಲ್ಲ. ಧಾರ್ಮಿಕವಾಗಿ ನೆಲೆಗಟ್ಟಿರುವ ರಾಜ್ಯ ನಮ್ಮದು. ಬೆಳಗಾವಿಯನ್ನ ಎಲ್ಲಿಗೆ ತೆಗೆದುಕೊಂಡು ಹೋಗಿದ್ದೀರಾ..? ನಾನು ಯಾವುದೇ ಸಮಾಜಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ನನ್ನ ರಾಜ್ಯ ಮುಂದೆ ಯಾವ ಅನಾಹುತಕ್ಕೆ ತುತ್ತಾಗಬಾರದು ಎಂದು ಜಾಗೃತಿ ಮೂಡಿಸಲು ಕೊಟ್ಟ ಹೇಳಿಕೆ ಇದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.