www.karnatakatv.net: ಹೆಚ್. ಡಿ. ಕುಮಾರಸ್ವಾಮಿ ಮೇಲೆ ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಯುತ್ತರವನ್ನು ನೀಡಿದ್ದಾರೆ.
ಬಿಜೆಪಿಯ ವೈಯಕ್ತಿಕ ದಾಳಿಗೆ ಹೆಚ್ ಡಿ ಕೆ, ನನ್ನ ಜೀವನವು ತೆರೆದ ಪುಸ್ತವಿದ್ದಂತೆ ನಾನು ಯಾವುದನ್ನು ಕದ್ದು ಮುಚ್ಚಿ ಮಾಡಿಲ್ಲ ಇದೆಲ್ಲ ಅವರಿಗೆ ಅನ್ವಯಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಸಿಂದಗಿ ಉಪ ಚುನಾವಣೆ ಕಾರ್ಯಕ್ರಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಪಕ್ಷವು ಇತ್ತಿಚ್ಚೆಗೆ ತುಂಬಾ ಏಳಿಗೆಯತ್ತ ಸಾಗುತ್ತಿವುದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿ ಅವ್ರು ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ನನನ್ನು ಡಿಸ್ಟರ್ಬ್ ಮಾಡೋಕೆ ಅಂತಾ ಈ ರೀತಿ ಮಾಡುತ್ತಿದ್ದಾರೆ ಆದರೆ ಇವರು ಈ ರೀತಿ ಮಾಡೊದ್ರಿಂದ ನಾನು ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಒಬ್ಬೊಬ್ಬ ನಾಯಕರಿಗೂ ಒಂದೋoದು ಇತಿಹಾಸವಿದೆ. ಅದನ್ನೇಲ್ಲ ನಾನು ಹೇಳೋಕೆ ಆಗೋದಿಲ್ಲ ಅವರ ಪದಬಳಕೆಗೆ ನಾನು ಹತ್ತರಷ್ಟು ಕೆಸರೆರಚಬಲ್ಲೆ. ಈ ರೀತಿಯ ವೈಯಕ್ತಿಕ ಹೇಳಿಕೆಗಳಿಂದ ಯಾರಿಗೂ ಉಪಯೋಗವಾಗೋದಿಲ್ಲ ನನ್ನಿಂದ ಈ ಸಮಾಜಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ಹೆಚ್.ಡಿ.ಕೆ ತಿಳಿಸಿದ್ರು.