Friday, October 18, 2024

Latest Posts

ಪತ್ರಕರ್ತ ಎಂದು ಗೊತ್ತಿರಲಿಲ್ಲ – ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ.!

- Advertisement -

ಸಾರಿಗೆ ಹೋರಾಟದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಇಂದು ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು, ಭ್ರಷ್ಟಾಚಾರದ ಆರೋಪವನ್ನು ಹೊರಿಸಿದ್ದೀರಾ ಇದು ಸರಿಯಲ್ಲ. ನೀತಿಗಳನ್ನು ಗಾಳಿಗೆ ತೂರುವುದು ಸರಿಯಲ್ಲ. ಹಾಗಾಗಿ ಸರಿಯಾದ ತನಿಖೆ ಮಾಡಿಬೇಕಿದೆ. ನನ್ನ ಬ್ಯಾಂಕ್ ಖಾತೆ ಹಾಗೂ ನನ್ನ ಆಸ್ಥಿಗಳನ್ನು ತನಿಖೆ ಮಾಡಿ ಸರ್ಕಾರಕ್ಕೆ ನೀಡಬೇಗಿದೆ. ನಾನು ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡಿಲ್ಲಾ, ಯಾವೂದೇ ಮಂತ್ರಿಗಳನ್ನು ಖಾಸಗಿಯಾಗಿ ಭೇಟಿ ಮಾಡಿಲ್ಲಾ. ಆದರೇ ಒಬ್ಬ ವ್ಯಕ್ತಿ ಬಂದು ಎಷ್ಟು ಕೊಡಬೇಕು ಎಂದು ಕೇಳಿದರೆ ಎಷ್ಟು ಸರಿ, ಮೊದಲನೆ ಅಪರಾದವೇ ಅದು.

ನಾನು ಬೇಡಿಕೆಗೆ ಒಪ್ಪಿಕೊಂಡರೆ ನಾನು ಎರಡನೇ ಅಪರಾಧಿ ಆಗುತ್ತೇನೆ. ಕರ್ನಾಟಕದ ರೈತರ ಚಳವಳಿ ಚಾರಿತ್ರಿಕವಾದ ಚಳುವಳಿ, ಭಾರತ ದೇಶದಲ್ಲಿ ನಡೆದ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಕಾಣುವ ನನ್ನಂತ ಕಾರ್ಯಕರ್ತನ್ನ, ಭ್ರಷ್ಟಾಚಾರ ವಿರೋಧಿ ಮಾಡುವಂತಹ ನನ್ನ ನೈತಿಕತೆಗೆ ಮಸಿ ಬಳಿಯುವಂತ ಪ್ರಯತ್ನ ಮಾಡಿದ್ದಾರೆ. ಅದನ್ನ ನಾನು ಕಂಡಿಸುತ್ತೇನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಕೋಡಿಹಳ್ಲಿ ಚಂದ್ರಶೇಖರ್ ಹೇಳಿದ್ದಾರೆ.

ಇನ್ನು ಮಾದ್ಯಮಗಳು ಶಿಷ್ಟಾಚಾರ ಅನುಸರಣೆ ಮಾಡಬೇಕು. ‘ನನ್ನ ಮನೆಯಲ್ಲೆ ಕೂತು, ಊಟ ಮಾಡಿ ವೀಡಿಯೋ ಮಾಡಿ ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ ಎಂದರೆ ಏನು’. ಪತ್ರಕರ್ತ ಎಂದು ನನಗೆ ಗೊತ್ತಿರಲಿಲ್ಲ. ಒಂದು ವರ್ಷ ಮೂರು ತಿಂಗಳ ನಂತರ ವೀಡಿಯೋ ಬಿಡುಗಡೆ ಮಾಡುತ್ತಾರೆ ಯಾಕೆ? ನಾನು ಹತ್ತುಪೈಸೆ ಹಣ ಪಡೆದುಕೊಂಡಿದ್ದೇನೆ ಎಂದು ಸಾಬೀತುಪಡಿಸಲಿ.

ಮಾದ್ಯಮ ಎಂದು ಹೇಳಿ ಅನಾಚಾರ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರ ನ್ಯಾಯಾಂಗ ತೀರ್ಮಾನ ಮಾಡಬೇಕು ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಡಿಹಳ್ಲಿ ಚಂದ್ರಶೇಖರ್ ತಿಳಿಸಿದ್ದಾರೆ.

ಅಭಿಜಿತ್ ಗಣೇಶ್, ಕರ್ನಾಟಕ ಟಿವಿ

- Advertisement -

Latest Posts

Don't Miss