Wednesday, September 11, 2024

Latest Posts

ಗಟ್ಟಿ ಧ್ವನಿಯಲ್ಲಿ ಬಿಜೆಪಿ ವಿರುದ್ದ ಹೋರಾಡಲು ನಾನು ಸದಾಸಿದ್ದ: ಸಿಎಂ ಸಿದ್ದರಾಮಯ್ಯ

- Advertisement -

Belagavi News: ಬೆಳಗಾವಿ: ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್‌ನಲ್ಲಿಂದು ಸಿಎಂ ಸಿದ್ದರಾಮಯ್ಯ ಮಾಧ್ಯಮದವರರೊಂದಿಗೆ ಮಾತನಾಡಿದರು.

ಮಳೆಯಲ್ಲಿ ಆಗುವ ತೊಂದರೆಗಳನ್ನ ನೋಡಲು ಬಂದಿದ್ದೇನೆ. ಇವತ್ತು ಬೆಳಗಾವಿಗೆ ಬಂದಿದ್ದೆನೆ ಪರಿಹಾರ ಕೊಡುವ ಕೆಲಸವನ್ನ ಸರಕಾರ ಮಾಡುತ್ತಿದೆ. ಜನಜಾನುವಾರುಗಳು ಮನಷ್ಯರ ಪ್ರಾಣಿಹಾನಿಗೆ ಪರಿಹಾರ ಕೊಡುತ್ತಿದೆ. ಮುಂದಿನವಾರ ಹೆಚ್ಚಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ. ಸರಕಾರ ಮಳೆಯನ್ನು ಎದುರಿಸಲು ಸಜ್ಜಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹದ ಗ್ರಾಮಗಳಿಗೆ ಶಾಶ್ವತ ಪರಿಹಾರದ ವಿಚಾರದ ಬಗ್ಗೆ ತಿರ್ಮಾನ ಮಾಡಲಾಗುತ್ತದೆ. ಜನರು ಸಹಕಾರ ಕೊಡಬೇಕು.

ಯಡಿಯೂರಪ್ಪ ಅವರು ಸಿಎಂ ಇದ್ದಾಗ 5 ಲಕ್ಷ ಪರಿಹಾರ ಕೊಟ್ಡರು. ಆ ಸಮಯದಲ್ಲಿ ಎಲ್ಲರಿಗೂ ಸಿಕ್ಕಿಲ್ಲ. ಸದ್ಯ 1,20,000 ಸಾವಿರ ಹಣವನ್ನ ಕೊಡುತ್ತೆವೆ, ಜೊತೆಗೆ ಒಂದು ಮನೆಯನ್ನು ಕೊಡುತ್ತಿವೆ. ಗೃಹ ಲಕ್ಷ್ಮಿ ಹಣ ಕೇವಲ ಜುಲೈ ತಿಂಗಳದ್ದು ಬಂದಿಲ್ಲ ಕೂಡಲೆ ಹಾಕಲಾಗುವುದು ಎಂದು ಸಿಎಂ ಹೇಳಿದರು.

ಸಿಎಂ ತನಿಖೆಗೆ ವಿರುದ್ದ ತನಿಖೆಗೆ ಪ್ರಾಶ್ಯೂಕೇಶನ್ ಕೊಡ್ತಾರಾ ಎಂಬ ಮಾದ್ಯಮದ ಪ್ರಶ್ನೆಗೆ ಉತ್ತರಸಿದ ಸಿಎಂ ಇವತ್ತು ದೆಹಲಿಯಿಂದ ಬರ್ತಾರೆ ಎಂದು ನಿಮಗೆ ಹೇಳಿದ್ರಾ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದ ಸಿಎಂ, ಅಬ್ರಾಹಂ ಅವರು ಕೊಟ್ಟಿರುವ ಕಂಪ್ಲೀಟ್ ನ್ನ ತಿರಸ್ಕಾರ ಮಾಡಲು ನಾನು ಮನವಿ ಮಾಡಿದ್ದೆವೆ. ನಾವು ಕಾನೂನಾತ್ಮಕವಾಗಿ,ರಾಜಕೀಯವಾಗಿ ಹೋರಾಟ ಮಾಡಲು ನಾವು ಸಿದ್ದ . ಗಟ್ಟಿ ದ್ವನಿಯಲ್ಲಿ ಬಿಜೆಪಿ ವಿರುದ್ದ ಹೋರಾಡಲು ನಾನು ಸದಾಸಿದ್ದ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss